masthmagaa.com:
ಯುಕ್ರೇನ್ ಮತ್ತು ರಷ್ಯಾ ನಡುವೆ ಇಷ್ಟು ದಿನದಿಂದ ನಡೀತಿದ್ದ ಸಂಘರ್ಷ ಕೊನೆಗೂ ಯುದ್ಧವಾಗಿ ಪರಿವರ್ತನೆ ಆಗಿದೆ. ಎರಡು ದೇಶಗಳ ಸೇನೆಗಳು ಪರಸ್ಪರ ಎದುರು ಬದುರು ನಿಂತು ಹೊಡೆದಾಡೋಕೆ ಶುರು ಮಾಡಿದ್ದಾರೆ. ಇತ್ತೀಚೆಗಷ್ಟೇ ಯುಕ್ರೇನ್ಗೆ ಸೇರಿದ ಡಾನೆಟ್ಸ್ಕ್ ಮತ್ತು ಲುಹೆನ್ಸ್ಕ್ ಪ್ರದೇಶಗಳನ್ನ ಸ್ವತಂತ್ರ ಅಂತ ಘೋಷಿಸಿದ್ದ ಪುಟಿನ್, ಈಗ ಆ ಪ್ರದೇಶಗಳಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಗೆ ಆದೇಶಿಸಿದ್ದಾರೆ. ರಷ್ಯಾ ಸೇನೆಯ ಸುಪ್ರೀಂ ಕಮಾಂಡರ್ ಇನ್ ಚೀಫ್ ಆಗಿರೋ ಪುಟಿನ್ ಕಡೆಯಿಂದ ಈ ಆದೇಶ ಬರ್ತಿದ್ದಂತೇ ರಷ್ಯಾ ಸೇನೆ ಯುಕ್ರೇನ್ನಲ್ಲಿ ಆಪರೇಷನ್ ಶುರು ಮಾಡ್ಕೊಂಡು ಬಿಟ್ಟಿದೆ. ಯುಕ್ರೇನ್ ಸೇನಾ ನೆಲೆ, ಶಸ್ತ್ರಾಗಾರ, ಸರ್ಕಾರಿ ಕಟ್ಟಡ, ಏರ್ಪೋರ್ಟ್ಗಳನ್ನ ಗುರಿಯಾಗಿಸಿ ರಷ್ಯಾ ಕ್ಷಿಪಣಿ ದಾಳಿ ಮಾಡಿದೆ. ಇದಕ್ಕೆ ಪ್ರತಿಯಾಗಿ ತಮ್ಮ ಪ್ರದೇಶಗಳನ್ನ ಕಾಪಾಡಿಕೊಳ್ಳಲು ಯುಕ್ರೇನ್ ಸೇನೆ ಕೂಡ ಪ್ರತಿದಾಳಿ ನಡೆಸ್ತಿದೆ. ಇದರೊಂದಿಗೆ ಎರಡು ಸೇನೆಗಳ ಮಧ್ಯೆ ಯುದ್ಧ ಆರಂಭವಾಗಿಬಿಟ್ಟಿದೆ. ಡಾನೆಟ್ಸ್ಕ್ ಮತ್ತು ಲುಹೆನ್ಸ್ಕ್ನ ಹಲವು ಕಡೆ ಭಾರಿ ಸ್ಫೋಟ, ಗುಂಡಿನ ಸದ್ದು ಕೇಳಿಸಿವೆ. ಯುಕ್ರೇನ್ ರಾಜಧಾನಿ ಕ್ವೀವ್ ಮತ್ತು ಮತ್ತೊಂದು ಪ್ರಮುಖ ನಗರವಾದ ಖಾರಿವ್ನಲ್ಲಿದ್ದ ಮಿಲಿಟರಿ ಕಮಾಂಡ್ ಸೆಂಟರ್ಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎನ್ನಲಾಗ್ತಿದೆ. ರಷ್ಯಾದ 5 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ಗಳನ್ನ ಯುಕ್ರೇನ್ ಸೇನೆ ಹೊಡೆದುರುಳಿಸಿದೆ ಅಂತ ವರದಿಯಾಗಿದೆ. ಯುಕ್ರೇನ್ ರಾಜಧಾನಿ ಕ್ವಿವ್ನಲ್ಲೂ ಸ್ಫೋಟ ಸಂಭವಿಸಿದೆ. ಆದ್ರೆ ರಷ್ಯಾ ಹೆಚ್ಚಾಗಿ ದಾಳಿ ಮಾಡ್ತಿರೋದು ಯುಕ್ರೇನ್ನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ. ದಕ್ಷಿಣದ ಒಡೆಸ್ಸಾ ಮತ್ತು ಮಾರಿವುಪೌಲ್ನಂಥಾ ಬಂದರು ನಗರಗಳಲ್ಲಿ ರಷ್ಯಾ ತನ್ನ ಯೋಧರನ್ನ ಲ್ಯಾಂಡ್ ಮಾಡಿಸಿ ಕಾರ್ಯಾಚರಣೆ ನಡೆಸ್ತಿದೆ. ಯುಕ್ರೇನ್ನ ಉತ್ತರ ಭಾಗದಲ್ಲಿ ರಷ್ಯಾದ ಫ್ರೆಂಡ್ ಬೆಲಾರುಸ್ ಇದೆ. ಇಲ್ಲೂ ದೊಡ್ಡ ಪ್ರಮಾಣದ ಸೇನೆ ನಿಯೋಜಿಸಿಕೊಂಡಿದೆ ರಷ್ಯಾ. ಈ ಬೆಲಾರುಸ್ ಗಡಿಗೆ ಹತ್ತಿರದಲ್ಲೇ ಯುಕ್ರೇನ್ ರಾಜಧಾನಿ ಕ್ವೀವ್ ಇದೆ. ಸೋ ಕ್ವೀವ್ ಮೇಲೆ ಉತ್ತರದಿಂದ ದಾಳಿಯಾಗಿರೋ ಚಾನ್ಸಸ್ ಇದೆ ಎನ್ನಲಾಗ್ತಿದೆ. ರಷ್ಯಾ ಸೇನೆಗೆ ಹೋಲಿಸಿದ್ರೆ ಯುಕ್ರೇನ್ ಸೇನೆ ತುಂಬಾ ಸಣ್ಣದು. ಅಲ್ಲದೆ ಯುಕ್ರೇನ್ ಬಳಿ ಪರಮಾಣು ಶಸ್ತ್ರಾಸ್ತ್ರ ಕೂಡ ಇಲ್ಲ. ಹೀಗಾಗಿ ತನಗೆ ಸೇರಿದ ಡಾನೆಟ್ಸ್ಕ್, ಲುಹೆನ್ಸ್ಕ್ ಪ್ರದೇಶಗಳನ್ನ, ತನ್ನ ದೇಶವನ್ನ, ತನ್ನ ಪ್ರಜೆಗಳನ್ನ ರಕ್ಷಿಸಿಕೊಳ್ಳಲು ಯುಕ್ರೇನ್ ಭಾರಿ ಹರಸಾಸಹ ಪಡ್ತಿದೆ.
-masthmagaa.com
Contact Us for Advertisement