ಶಿವಮೊಗ್ಗ: 10 ವರ್ಷದ ಬಾಲಕಿ ಮೇಲೆ 76 ವರ್ಷದ ವೃದ್ಧನಿಂದ ಲೈಂಗಿಕ ದೌಜನ್ಯ!

masthmagaa.com:

ಅಪ್ರಾಪ್ತ ಬಾಲಕಿ ಮೇಲೆ 76 ವರ್ಷದ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರೋ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿ ವೃದ್ಧನನ್ನ ಬಂಧಿಸಲಾಗಿದೆ. ಅಂದ್ಹಾಗೆ ಚಾಕೊಲೇಟ್ ಕೊಡ್ತೀನಿ ಅಂತ ಹೇಳಿ 10 ವರ್ಷದ ಬಾಲಕಿಯನ್ನ ಹೊಳೆ ಹತ್ತಿರ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಸದ್ಯ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

-masthmagaa.com

Contact Us for Advertisement

Leave a Reply