“ಎ. ಆರ್‌ ರೆಹಮಾನ್‌ ಅವರ ಅತ್ಯಂತ ಕೆಟ್ಟ ಕಾರ್ಯಕ್ರಮ” ಎಂದ ಅಭಿಮಾನಿ !

masthmagaa.com:

ಎ.ಆರ್‌ ರೆಹಮಾನ್‌ ಅವರ ಮ್ಯೂಸಿಕ್‌ನ್ನ ಇಷ್ಟ ಪಡದವರೇ ಇಲ್ಲ. ಎ.ಆರ್‌ ರೆಹಮಾನ್‌ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಜೀವನದಲ್ಲಿ ಒಂದು ಸಲ ಅದ್ರು ಎ.ಆರ್‌ ರೆಹಮಾನ್‌ ಅವರನ್ನ ಲೈವ್‌ ಆಗಿ ನೋಡಬೇಕು ಅಂತ ಎಷ್ಟೋ ಅಭಿಮಾನಿಗಳು ಆಸೆ ಪಡ್ತಾರೆ. ಇದೀಗ ಒಂದಿಷ್ಟು ರೆಹಮಾನ್‌ ಫ್ಯಾನ್ಸ್‌ ಅವರ ಮೇಲಿನ ಅಭಿಮಾನಿ ಕಡಿಮೆ ಆಯ್ತು ಅನ್ನೋ ಮೂಲಕ ತಮ್ಮ ಬೇಸರವನ್ನ ಹೊರಹಾಕಿದ್ದಾರೆ. ನಡೆದಿದ್ದಾದ್ರೂ ಏನು ಅಂತ ನೋಡೋದಾದ್ರೆ,

https://twitter.com/gururag96/status/1700865046958747969?s=20

ರೆಹಮಾನ್‌ ಅವರ ಸಂಗೀತ ಕಾರ್ಯಕ್ರಮವನ್ನ ಚೆನ್ನೈನ ಮರಕ್ಕುಮಾ ನೆಂಜಮ್​ನಲ್ಲಿ ಆಯೋಜಿಸಿದ್ರು. ಈ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಕೂಡ ಸೇರಿದ್ರು. ಒಂದು ಟಿಕೆಟ್‌ ಪ್ರೈಸ್‌ 2000ರೂ. ಟಿಕೆಟ್‌ ತೆಗೆದುಕೊಂಡವರಿಗೂ ಸಹ ಈ ಸಂಗೀತ ಕಾರ್ಯಕ್ರಮ ನೋಡೋಕೆ ಸಾಧ್ಯವಾಗಿಲ್ಲ. ಯಾಕಂದ್ರೆ ಕಾರ್ಯಕ್ರಮದಲ್ಲಿ ಆಸನದ ವ್ಯವಸ್ಥೆ, ಎಂಟ್ರಿ, ಎಗ್ಸಿಟ್‌ ವ್ಯವಸ್ಥೆ ಯಾವುದೂ ಕೂಡ ಸರಿ ಇರಲಿಲ್ಲ ಅಂತ ಜನ ಆರೋಪ ಮಾಡಿದ್ದಾರೆ.ದುಡ್ಡನ್ನ ಕೊಟ್ರು ಸಹ ನಮಗೆ ಕಾರ್ಯಕ್ರಮ ನೋಡೋಕೆ ಆಗಲಿಲ್ಲ ಅಂತ ಒಂದಿಷ್ಟು ಜನ ಬೇಜಾರಾಗಿದ್ದಾರೆ.

https://twitter.com/ashokrbp/status/1700934974315352236?s=20

ಇನ್ನೊಂದಿಷ್ಟುಜನ ಎ.ಆರ್‌ ರೆಹಮಾನ್‌ ಅವರು ನೀಡಿದ ಅತ್ಯಂತ ಕೆಟ್ಟ ಕಾರ್ಯಕ್ರಮ.30 ವರ್ಷಗಳಿಂದ ರೆಹಮಾನ್ ಮೇಲಿರುವ ನನ್ನ ಅಭಿಮಾನ ಇಂದು ಸತ್ತು ಹೋಯಿತು” ಅಂತ ಕಾಮೆಂಟ್‌ ಕೂಡ ಮಾಡಿದ್ದಾರೆ.

https://twitter.com/jp15may/status/1700909469188997421?s=20

-masthmagaa.com

Contact Us for Advertisement

Leave a Reply