ನ್ಯೂಯಾರ್ಕ್‌ನಲ್ಲಿ ಅತ್ಯಂತ ದುಬಾರಿ ಪಾರ್ಕಿಂಗ್‌ ಸ್ಪಾಟ್‌! ಕೋಟಿಗಟ್ಟಲೇ ಚಾರ್ಜ್‌!

masthmagaa.com:

ನಗರ ಪ್ರದೇಶಗಳಲ್ಲಿ ಕಾರ್‌ ಪಾರ್ಕ್‌ ಮಾಡೋದೆ ಒಂದು ಸಮಸ್ಯೆ, ಕೆಲವೊಮ್ಮೆ ಸರಿಯಾದ ಸ್ಥಳ ಸಿಗದೆ ಪರದಾಡಬೇಕಾಗುತ್ತೆ. ಆದ್ರೆ ನ್ಯೂಯಾರ್ಕ್‌ನ ಕೆಲ ಕಡೆಗಳಲ್ಲಿ ಜನ ತಮ್ಮ ಗಾಡಿಗಳನ್ನ ಪಾರ್ಕ್‌ ಮಾಡೋಕೆ ಕೋಟಿಗಟ್ಟಲೇ ಹಣ ಕೊಡ್ತಾ ಇದಾರೆ. ನ್ಯೂಯಾರ್ಕ್‌ ನಗರದ ಕೆಲ ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಹತ್ತಿರ ಪಾರ್ಕಿಂಗ್‌ ಸ್ಥಳಕ್ಕೆ ಸಾವಿರಾರು ಡಾಲರ್‌ಗಳನ್ನ ಚಾರ್ಜ್‌ ಮಾಡಲಾಗ್ತಿದೆ. ಈ ವಿಐಪಿ ಜಾಗದಲ್ಲಿ ಪಾರ್ಕಿಂಗ್‌ ಸ್ಪಾಟ್‌ ಬೇಕು ಅಂದ್ರೆ 5.9 ಲಕ್ಷ ಡಾಲರ್‌ ಅಂದ್ರೆ ಸುಮಾರು 4.8 ಕೋಟಿ ರೂಪಾಯಿ ಕೊಡ್ಬೇಕು ಎನ್ನಲಾಗಿದೆ. ಕೇವಲ ಅಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ಮಾತ್ರವಿರೊ ಈ ಪಾರ್ಕಿಂಗ್‌ ಸ್ಪಾಟ್‌ಗಳು ಆಟೋಮ್ಯಾಟೆಡ್‌ ರೊಬೊಟ್‌ನಿಂದ ಕೆಲಸ ಮಾಡುತ್ತೆ. ಅಂದ್ರೆ ಕಾರ್‌ನ್ನ ಲಿಫ್ಟ್‌ ಮಾಡೋದು, ಕೆಳಗಿಳಿಸೋದು ಎಲ್ಲವೂ ಆಟೋಮ್ಯಾಟೆಡ್‌ ರೊಬೋಟ್‌ಗಳು ಮಾಡುತ್ವೆ. ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಟ್ಯಾಗ್‌‌ (RFID)ನಿಂದ ಸ್ವೈಪ್‌ ಮಾಡಿದ್ರೆ ಸಾಕು ನಿಮ್ಮ ಕಾರ್‌ 2 ನಿಮಿಷಗಳಲ್ಲಿ ನಿಮ್ಮ ಮುಂದಿರುತ್ತೆ. ಈ ಟ್ಯಾಗ್‌ನಲ್ಲಿ ಕಾರ್‌ನ ಡಿಟೇಲ್ಸ್‌ ಇರುತ್ತೆ. ಅದನ್ನ ರೀಡ್‌ ಮಾಡಿ, ರೊಬೋಟ್‌, ಕಾರ್‌ನ್ನ ತಕ್ಷಣ ತಂದು ನಿಲ್ಸುತ್ತೆ. ಈ ಸೌಲಭ್ಯವಿರೋ ಕಾರಣ ಈ ಪಾರ್ಕಿಂಗ್‌ ರೇಟ್‌ ಜಾಸ್ತಿ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply