ಇಮ್ರಾನ್‌ ಖಾನ್‌ರನ್ನ ಅರೆಸ್ಟ್‌ ಮಾಡ್ತೀವಿ..! ಆದ್ರೆ? ಪಾಕ್‌ ಸಚಿವ ಹೇಳಿದ್ದೇನು?

masthmagaa.com:

ಬಂಧನ ಪೂರ್ವ ಜಾಮೀನು ಪಡೆದಿರೋ ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ರನ್ನ ಬೇಲ್ ಅವಧಿ ಮುಗಿದ್ಮೇಲೆ ಅರೆಸ್ಟ್‌ ಮಾಡ್ತೀವಿ ಅಂತ ಪಾಕಿಸ್ತಾನ ಗೃಹ ಸಚಿವ ರಾನಾ ಸನೌಲ್ಲಾ ಹೇಳಿದ್ದಾರೆ. ಹೀಗಂತ ಅಲ್ಲಿನ ಮಾಧ್ಯಮಗಳು ವರದಿ ಪ್ರಕಟಿಸಿವೆ. ಇಮ್ರಾನ್‌ ಖಾನ್‌ ಎರಡು ಡಜನ್‌ಗಿಂತಲೂ ಹೆಚ್ಚಿನ ಕೇಸ್‌ನಲ್ಲಿ ತಪ್ಪು ಮಾಡಿದ್ದಾರೆ. ಇದರಲ್ಲಿ ದೇಶದ ಮೇಲಿನ ಭದ್ರತೆಗೆ ಅಪಾಯ ಉಂಟಾಗುವಂತ ಹೇಳಿಕೆ, ಗಲಭೆಗೆ ಪ್ರಚೋದನೆ ಕೊಟ್ಟದ್ದು, ಹಾಗೂ ರಾಷ್ಟ್ರದ್ರೋಹಗಳೂ ಸೇರಿವೆ ಅಂತ ಗೃಹ ಸಚಿವರು ಹೇಳಿದ್ದಾರೆ. ಇನ್ನು ಇದೇ ವೇಳೆ ಪ್ರಾಣಾಪಾಯ ಭಯದಿಂದ ಇಮ್ರಾನ್‌ ಖಾನ್‌ ನಿವಾಸಕ್ಕೆ ಭದ್ರತೆ ನೀಡಿರೋದನ್ನ ಕೂಡ ಅವರು ಸ್ವಾಗತ ಮಾಡಿದ್ದಾರೆ. ಅಂದ್ಹಾಗೆ ಇದೇ ತಿಂಗಳ ಅಂದ್ರೆ ಜೂನ್‌ 2 ತಾರೀಖು ಇಮ್ರಾನ್‌ ಖಾನ್‌ಗೆ ಪೇಷಾವರ್‌ ಕೋರ್ಟ್‌ ಮೂರುವಾರಗಳ ಬಂಧನ ಪೂರ್ವ ಜಾಮೀನು ನೀಡಿತ್ತು.

-masthmagaa.com

Contact Us for Advertisement

Leave a Reply