ಇದು ಮೊದಲ ನಕ್ಷತ್ರ ಹುಟ್ಟಿದ ಕಥೆ! ಈಗಲೂ ನೋಡಬಹುದಂತೆ!

masthmagaa.com:

ಈ ಸೃಷ್ಟಿಯ ಹಿಂದಿನ ರಹಸ್ಯವನ್ನು ಕಂಪ್ಲೀಟಾಗಿ ಭೇದಿಸೋಕೆ ತುಂಬಾ ಸಮಯ ಬೇಕು. ಆಕಾಶದಲ್ಲಿ ಎಷ್ಟು ನಕ್ಷತ್ರಗಳಿವೆ ಅನ್ನೋದು ಯಾರಿಗೂ ಗೊತ್ತಿಲ್ಲ. ಆದ್ರೀಗ ಈ ಸೃಷ್ಟಿ ಮೊಟ್ಟ ಮೊದಲಿಗೆ ನಕ್ಷತ್ರದಿಂದ ಬೆಳಗಿದ್ದು ಯಾವಾಗ ಅನ್ನೋದನ್ನ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ರಾಯಲ್ ಎಸ್ಟ್ರೋನಾಮಿಕಲ್ ಸೊಸೈಟಿಯಲ್ಲಿ ವರದಿ ಪ್ರಕಟವಾಗಿದ್ದು, ಬಿಗ್ ಬ್ಯಾಂಗ್ ಆದ 25-35 ಕೋಟಿ ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿಗೆ ನಕ್ಷತ್ರ ಹೊಳೆಯಿತು. ಬ್ರಹ್ಮಾಂಡಕ್ಕೆ ಬೆಳಕು ಬಂತು ಅಂತ ತಿಳಿಸಿದೆ.

ಯುನಿವರ್ಸಿಟಿ ಕಾಲೇಜ್ ಲಂಡನ್​ ಪ್ರೊಫೆಸರ್ ರಿಚರ್ಡ್​ ಇಲೀಸ್​ ಮತ್ತವರ ತಂಡ ತುಂಬಾ ದೂರದಲ್ಲಿರೋ 6 ಬೇರೆ ಗೆಲಾಕ್ಸಿಯ ಅಧ್ಯಯನ ಮಾಡ್ತಿದ್ದಾರೆ. ಇವುಗಳು ತುಂಬಾ ದೂರವಾಗಿದ್ದು ಸ್ಕ್ರೀನ್ ಮೇಲೆ ಡಾಟ್ ರೀತಿ ಕಾಣಿಸ್ತಿತ್ತು. ಆದ್ರೂ ಕೂಡ ಇವುಗಳ ಆಯಸ್ಸು ಪತ್ತೆಹಚ್ಚಿ ಮೊಟ್ಟ ಮೊದಲ ನಕ್ಷತ್ರ ಸೃಷ್ಟಿಯಾದ ಸಮಯವನ್ನು ಪತ್ತೆಹಚ್ಚಿದ್ದಾರೆ. 1380 ಕೋಟಿ ವರ್ಷಗಳ ಹಿಂದೆ ಬಿಗ್​ ಬ್ಯಾಂಗ್ ಆಯ್ತು. ಆದ್ರೆ ಆರಂಭದಲ್ಲಿ ಇಡೀ ಬ್ರಹ್ಮಾಂಡ ಕತ್ತಲಲ್ಲಿ ಮುಳುಗಿತ್ತು. 25ರಿಂದ 35 ಕೋಟಿ ವರ್ಷ ಅಂಧಕಾರದಲ್ಲಿ ಕಳೆದ ಬಳಿಕ ಮೊದಲ ನಕ್ಷತ್ರ ಹುಟ್ಟಿ, ಬೆಳಕು ಕೊಡ್ತು ಅಂತ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಹಾಗಾದ್ರೆ ಆ ಗಾಢಾಂಧಕಾರದಲ್ಲಿ ನಕ್ಷತ್ರ ಹುಟ್ಟಿದ್ದು ಹೇಗೆ ಅನ್ನೋ ಪ್ರಶ್ನೆ ಎದುರಾಗಬಹುದು. ಮೊದಲಿಗೆ ಸ್ಪೇಸ್​​​​​​​​​ ಕೇವಲ ವಿಕಿರಣಕಾರಿ ಹೈಡ್ರೋಜನ್ ಗ್ಯಾಸ್​ ತುಂಬಿಕೊಂಡಿತ್ತು. ಇದನ್ನು cosmic microwave background ಅಂತ ಕರೆಯಲಾಗ್ತಿತ್ತು. ನಂತರದಲ್ಲಿ ಹೈಡ್ರೋಜನ್ ಮೋಡಗಳು ಒಟ್ಟಿಗೆ ಸೇರೋಕೆ ಶುರುವಾದ್ವು. ಆಮೇಲೆ ಅದ್ರ ಅಂತರಾಳದಲ್ಲಿ ತಾಪಮಾನ ಜಾಸ್ತಿಯಾಗಿ, ನ್ಯೂಕ್ಲಿಯರ್ ಫ್ಯೂಷನ್ ಶುರುವಾಯ್ತು..ಅಂದ್ರೆ ಹೈಡ್ರೋಜನ್ ಹೊತ್ತಿ ಉರಿಯೋದಕ್ಕೆ ಶುರುವಾಯ್ತು. ಈ ರೀತಿ ಮೊದಲ ನಕ್ಷತ್ರ ಸೃಷ್ಟಿಯಾಯ್ತು ಅಂತ ಅಧ್ಯಯನದಲ್ಲಿ ಗೊತ್ತಾಗಿದೆ.

ಆದ್ರೆ ಈ ಘಟನಾವಳಿಗಳನ್ನು ಸದ್ಯ ಲಭ್ಯವಿರೋ ಟೆಲಿಸ್ಕೋಪ್​​ಗಳ ಮೂಲಕ ನೇರವಾಗಿ ನೋಡಲು ಸಾಧ್ಯವಿಲ್ಲ. ಆದ್ರೆ ಇದೇ ವರ್ಷ ನವೆಂಬರ್​​ನಲ್ಲಿ ನಾಸಾ ಕಳುಹಿಸುತ್ತಿರುವ James Webb Space Telescope ತುಂಬಾ ಶಕ್ತಿಶಾಲಿಯಾಗಿದ್ದು, ಇದ್ರ ಮೂಲಕ ಮೊಟ್ಟ ಮೊದಲ ನಕ್ಷತ್ರದ ರಚನೆಯ ಘಟನಾವಳಿಗಳನ್ನು ಸ್ಪಷ್ಟವಾಗಿ ನೋಡಬಹುದು ಅಂತ ತಜ್ಞರು ಹೇಳಿದ್ದಾರೆ.

ಸಾವಿರಾರು ಕೋಟಿ ವರ್ಷಗಳ ಹಿಂದೆ ನಡೆದಿರೋ ಆ ನಕ್ಷತ್ರ ರಚನೆಯ ಘಟನಾವಳಿಯನ್ನು ಈಗ ನೋಡೋದು ಹೇಗೆ ಅಂತ ನಿಮಗೆ ಆಶ್ಚರ್ಯ ಆಗ್ಬೋದು.. ಅದಕ್ಕೆ ಒಂದು ಸಣ್ಣ ಸೈನ್ಸ್ ಅರ್ಥ ಮಾಡ್ಕೋಬೇಕು.. ಬೆಳಕು, ದೃಶ್ಯ ಟ್ರಾವೆಲ್ ಮಾಡೋಕೆ ಸಮಯ ಬೇಕು.. ಭೂಮಿ ಮೇಲಿನ ಯಾವುದಾದ್ರೂ ಒಂದು ಘಟನೆಯನ್ನು ಬೇರೆ ಗ್ರಹದಲ್ಲಿ ತುಂಬಾ ಟೈಂ ಕಾಯಬೇಕಾಗುತ್ತೆ. ಸೂರ್ಯನ ಬೆಳಕು ಭೂಮಿಗೆ ಬರೋಕೆ 8 ನಿಮಿಷ 20 ಸೆಕೆಂಡ್ ಬೇಕಾಗುತ್ತೆ.

ಅದೇ ರೀತಿ ಈ ಗೆಲಾಕ್ಸಿ ದೂರದಲ್ಲಿರೋದ್ರಿಂದ ಅಲ್ಲಿ 1300 ಕೋಟಿ ವರ್ಷಗಳ ಹಿಂದೆ ನಡೆದಿರೋ ಘಟನೆಗಳು, ದೃಶ್ಯಗಳು ನಮ್ಮ ಮಿಲ್ಕೀವೇಗೆ ಈಗ ಬರ್ತಾ ಇದೆ. ಈಗ ಜೇಮ್ಸ್ ಟೆಲಿಸ್ಕೋಪ್ ಮೂಲಕ ಕಾಣಿಸುತ್ತೆ ಅನ್ನೋದು ತಜ್ಞರ ವಾದ.

-masthmagaa.com

Contact Us for Advertisement

Leave a Reply