ಗೋವಾ ರಾಜ್ಯ ಘಟಕ ವಿಸರ್ಜಿಸಿದ ಆಪ್‌! ಕಾರಣವೇನು?

masthmagaa.com:

ಆಮ್‌ ಆದ್ಮಿ ಪಕ್ಷದ ಗೋವಾ ಘಟಕವನ್ನು ಪಕ್ಷದ ಸಂಚಾಲಕ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿಸರ್ಜನೆ ಮಾಡಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋವಾ ಆಪ್‌ ಘಟಕವನ್ನು ವಿಸರ್ಜಿಸಿರುವುದಾಗಿ ಪಕ್ಷ ತಿಳಿಸಿದೆ. ಆದ್ರೆ ಪಕ್ಷದ ಗೋವಾ ರಾಜ್ಯ ಘಟಕದ ಅಧ್ಯಕ್ಷರನ್ನ ಹುದ್ದೆಯಲ್ಲಿ ಕಂಟಿನ್ಯೂ ಮಾಡೋದಾಗಿ ತಿಳಿಸಿದೆ. ವಿಸರ್ಜನೆಗೆ ಆಪ್‌ ಯಾವುದೇ ಕಾರಣ ನೀಡಿಲ್ಲ. ಆದ್ರೆ ಶೀಘ್ರವೇ ರಾಜ್ಯ ಘಟಕಕ್ಕೆ ಹೊಸ ಸಂಘಟನೆಯ ಸ್ವರೂಪ ನೀಡಲಾಗುವುದು ಹಾಗೂ ಹೊಸ ಪದಾಧಿಕಾರಿಗಳನ್ನ ನೇಮಕ ಮಾಡಲಾಗುವುದು ಅಂತ ಹೇಳಿದೆ. ಅಂದ್ಹಾಗೆ ಕಳೆದ ವರ್ಷ ನಡೆದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಆಪ್‌ 2 ಸ್ಥಾನಗಳಲ್ಲಿ ಜಯಗಳಿಸಿತ್ತು.

-masthmagaa.com

Contact Us for Advertisement

Leave a Reply