ಆಸ್ಟ್ರೇಲಿಯಾ‌ ಸರ್ಕಾರದ ಬುಡವನ್ನ ಅಲ್ಲಾಡಿಸಿದ ಅಶ್ಲೀಲ ವಿಡಿಯೋ!

masthmagaa.com

ಲಿಂಗ ಸಮಾನತೆ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ಈಗಾಗಲೇ ಆಸ್ಟ್ರೇಲಿಯಾದಲ್ಲಿ ಮಹಿಳೆಯರು ರಸ್ತೆಗೆ ಇಳಿದು ಹೋರಾಡ್ತಿದ್ದಾರೆ. ಇದ್ರ ನಡುವೆಯೇ ದೇಶದ ಸಂಸತ್ತಿನಲ್ಲೇ, ಅಧಿಕಾರಿಗಳು ಹಾಗೂ ಸಂಸದರು ವಿವಿಧ ರೀತಿಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋಗಳು ಹೊರಬಿದ್ದಿದೆ. ಇದು ಸ್ಕಾಟ್ ಮಾರಿಸನ್ ಸರ್ಕಾರದ ಬುಡವನ್ನೇ ನುಡುಗಿಸಿದೆ. ಈಗಾಗಲೇ ಸರ್ಕಾರದ ಮಹಿಳಾ ಸಲಹೆಗಾರ್ತಿಯೊಬ್ಬರ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಹಲವು ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿದೆ.

ಅದ್ರ ನಡುವೆಯೇ ಹೊರಬಂದಿರೋ ಈ ಹೊಸ ವಿಡಿಯೋ ಮತ್ತು ಫೋಟೋಗಳು ಮಹಿಳಾ ಸಂಸದರು ಮತ್ತು ಮಹಿಳೆಯರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಬ್ಬಂದಿಯೊಬ್ಬರು, ಸಂಸತ್​​ನ ಪ್ರೇಯರ್​​ ಕೊಠಡಿಯನ್ನು ಸಂಸದರು ಮತ್ತು ಅಧಿಕಾರಿಗಳು ಲೈಂಗಿಕ ಕ್ರಿಯೆ ನಡೆಸಲು ಬಳಸಿಕೊಳ್ತಾರೆ. ಆಡಳಿತ ನಡೆಸುತ್ತಿರೋ ಮೈತ್ರಿಕೂಟದ ಸಂಸದರ ಒತ್ತಾಯದ ಮೇರೆಗೆ ವೇಶ್ಯೆಯಯರನ್ನ ಕೂಡ ಇಲ್ಲಿಗೆ ಕರೆ ತರಲಾಗುತ್ತೆ. ಸಂಸದರು ಮತ್ತು ಅಧಿಕಾರಿಗಳು ನೈತಿಕವಾಗಿ ದಿವಾಳಿಯಾಗಿದ್ದಾರೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply