ಮಾಫಿಯಾ ವಿರುದ್ದ ಸದನದಲ್ಲೇ ಶಪಥ! ಮರುದಿನವೇ ಎನ್‌ಕೌಂಟರ್‌, ದಬಾಂಗ್ ಯೋಗಿ!

masthmagaa.com:

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಮಾಫಿಯಾ ವಿರುದ್ದ ಗುಡುಗಿದ ಬೆನ್ನಲ್ಲೇ ಇಂದು ಉತ್ತರ ಪ್ರದೇಶದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಉಮೇಶ್‌ ಪಾಲ್‌ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅರ್ಬಾಜ್‌ನನ್ನ ಎನ್‌ಕೌಂಟರ್‌ ಮಾಡಲಾಗಿದೆ. ಸ್ಪೆಶಲ್‌ ಆಪರೇಶನ್ಸ್‌ ಗ್ರೂಪ್‌ ಹಾಗೂ ಯುಪಿ ಪೊಲೀಸರ ಜಂಟಿ ಕಾರ್ಯಾಚರಣೆ ಮಾಡಿ ಆರೋಪಿಯನ್ನ ಹತ್ಯೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ನಿನ್ನೆ ಮಾಫಿಯಾ ವಿರುದ್ದ ಅಬ್ಬರಿಸಿದ್ದ ಯೋಗಿ, ʻಇಸ್ ಮಾಫಿಯಾ ಕೋ ಮಿಟ್ಟಿ ಮೇ ಮಿಲಾದೇಂಗೇʼ ಅಂದ್ರೆ ಮಾಫಿಯಾವನ್ನ ಮಣ್ಣಿನಲ್ಲಿ ಹೂತುಹಾಕ್ತೀವಿ ಅಂತೇಳಿ ವಿರೋಧ ಪಕ್ಷಗಳ ವಿರುದ್ಧ ಸಿಡಿದು ಬಿದ್ದಿದ್ದಾರೆ. ಕಲಾಪದಲ್ಲಿ ಅಖಿಲೇಶ್‌ ಯಾದವ್‌ 2005ರಲ್ಲಿ ನಡೆದಿದ್ದ ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಅವ್ರ ಹತ್ಯೆ ಬಗ್ಗೆ ಪ್ರಸ್ತಾಪ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಯೋಗಿ, ದರೋಡೆಕಾರರು ಹಾಗೂ ಮಾಫಿಯಾಗಳಿಗೆ ಪ್ರೋತ್ಸಾಹ ನೀಡಿದವ್ರು ಯಾರು ಅಂತ ಪ್ರಶ್ನೆ ಮಾಡಿದ್ದಾರೆ. ಉಮೇಶ್‌ ಪಾಲ್‌ ಹತ್ಯೆಗೆ ಅವರ ಕುಟುಂಬದವ್ರು ಅತೀಕ್‌ ಅಹಮ್ಮದ್‌ನನ್ನ ಆರೋಪಿಸಿದ್ದಾರೆ. ಈ ಅತೀಕ್‌ ಅಹ್ಮದ್ ಸಮಾಜವಾದಿ ಪಕ್ಷ ಪೋಷಿಸಿದ ಮಾಫಿಯಾದ ಭಾಗ. ಈಗ ನಾವು ಆ ಮಾಫಿಯಾದ ಬೆನ್ನು ಮುರಿಯುವ ಕೆಲಸ ಮಾತ್ರ ಮಾಡುತ್ತಿದ್ದೇವೆ. ಇದು ನಿಜ ಅಲ್ವಾ ಅಂತ ಅಖಿಲೇಶ್ ಯಾದವ್ ಕಡೆಗೆ ಬೆರಳು ತೋರಿಸುತ್ತಾ ಹೇಳಿದ್ದಾರೆ. ಅಲ್ದೇ ಇವರೆಲ್ಲ ವೃತ್ತಿಪರ ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳ ಗಾಡ್‌ಫಾದರ್. ಅವರ ರಕ್ತನಾಳಗಳಲ್ಲಿ ಅಪರಾಧವಿದೆ. ನಾನು ಇಂದು ಈ ಸದನಕ್ಕೆ ಹೇಳುತ್ತಿದ್ದೇನೆ, ಈ ಮಾಫಿಯಾವನ್ನ ಈ ನೆಲೆಯಿಂದಲೇ ನಾಶ ಮಾಡುತ್ತೇನೆ ಅಂತ ಯೋಗಿ ಶಪಥ ಮಾಡಿದ್ದಾರೆ. ಅಂದ್ಹಾಗೆ 2005ರಲ್ಲಿ ರಾಜು ಪಾಲ್‌ ಅನ್ನೋರ ಹತ್ಯೆಯಾಗಿತ್ತು. ಆ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಅವರ ಮೇಲೆ ಕಳೆದ ಶುಕ್ರವಾರದಂದು ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿತ್ತು. ಇದು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ದ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಅದೇ ವಿಚಾರವನ್ನ ನಿನ್ನೆ ಸಮಾಜವಾದಿ ನಾಯಕ ಅಖಿಲೇಶ್‌ ಯಾದವ್‌ ಪ್ರಸ್ತಾಪ ಮಾಡಿದ್ರು. ಅದಕ್ಕೆ ಯೋಗಿ ಪ್ರತಿಕ್ರಿಯಿಸಿ, ಮಾಫಿಯಾಗಳನ್ನ ಮಣ್ಣಲ್ಲಿ ಹೂತು ಹಾಕ್ತೀವಿ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply