ನಟ ಚಿರಂಜೀವಿ ಸರ್ಜಾ 3ನೇ ಪುಣ್ಯ ಸ್ಮರಣೆ !

masthmagaa.com:

ನಟ ಚಿರಂಜೀವಿ ಸರ್ಜಾ ತಮ್ಮ ಕುಟುಂಬ, ಪ್ರೀತಿ ಪಾತ್ರರು, ಅಭಿಮಾನಿಗಳನ್ನೆಲ್ಲಾ ಅಗಲಿ ಇವತ್ತಿಗೆ 3 ವರ್ಷ ಕಳೆದಿದೆ. ಆದ್ರೂ ಸಹ ಅವರ ಅಭಿಮಾನಿ ಮತ್ತು ಕುಟುಂಬದವ್ರಿಗೆ ಚಿರು ಇಲ್ಲೇ ಇದ್ದಾರೆ ಅನ್ನೋ ನಂಬಿಕೆ ಅಚಲವಾಗಿದೆ. ಚಿರಂಜೀವಿ ಸರ್ಜಾ ಅವರ 3ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಅವರ ಸಮಾಧಿಗೆ ತೆರಳಿ ನಮನ ಸಲ್ಲಿಸಿದ್ದಾರೆ.

ಚಿರು ನೆನಪು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಯಾವಾಗಾಲೂ ಇರತ್ತೆ . ಸಮಾಧಿ ಬಳಿ ಚಿರು ದೊಡ್ಡ ಫೋಟೋ ಇಟ್ಟಿದ್ದಾರೆ. ಚಿರು ಅವರ ಕುಟುಂಬ ಪುಷ್ಪಾರ್ಚನೆ ಸಲ್ಲಿಸಿದ್ರು. ಇನ್ನು ಜ್ಯೂನಿಯರ್‌ ಚಿರು ಕೂಡ ಅಪ್ಪನ ಫೋಟೊಗೆ ಹೂ ಹಾಕಿ ಕಿಸ್‌ ಕೊಟ್ಟಿದ್ದಾರೆ. ಮೇಘನಾ ಮತ್ತು ಧೃವ ಸರ್ಜಾ ಭಾವುಕರಾಗಿ ಹೂ ಹಾಕಿ ನಮನ ಸಲ್ಲಿಸಿದ್ರು.

-masthmagaa.com

Contact Us for Advertisement

Leave a Reply