ಅಮೃತ ವರ್ಷಿಣಿ ಖ್ಯಾತಿಯ ನಟ ಶರತ್‌ ಬಾಬು ಇನ್ನಿಲ್ಲ !

masthmagaa.com:

ಅಮೃತ ವರ್ಷಿಣಿ ಸಿನಿಮಾ ಖ್ಯಾತಿಯ ಬಹುಭಾಷಾ ನಟ ಶರತ್‌ ಬಾಬು ಮೇ 3ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ ಅನ್ನುವ ವದಂತಿ ಹಬ್ಬಿತ್ತು. ಬಹುತೇಕ ಮಂದಿ ಅವರು ತೀರಿ ಹೋಗಿದ್ದಾರೆ ಅಂತಲೇ ಸಾಮಾಜಿಕ ಜಾಲತಾಣದಲ್ಲಿ ವಿಷಾದವನ್ನ ವ್ಯಕ್ತಪಡಿಸ್ತಾ ಇದ್ರು. ಆದರೆ ಅವರ ಕುಟುಂಬದವ್ರು ವದಂತಿಗಳಿಗೆ ಗಮನಕೊಡಬೇಡಿ, ಶರತ್‌ ಬಾಬು ಇನ್ನೂ ಚಿಕಿತ್ಸೆ ಪಡೀತಾ ಇದಾರೆ, ಅವರ ಸ್ಥಿತಿ ಗಂಭೀರ ಇದೆ ಅಂತ ಹೇಳಿದ್ರು. ಆದರೆ ಇವತ್ತು ನಟ ಶರತ್‌ ಬಾಬು ಅವರಿಗೆ ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲ್ತಾ ಇದ್ದ ಶರತ್‌ ಬಾಬು ಅವರಿಗೆ ಹೈದರಾಬಾದ್‌ನ ಎ.ಐ.ಜಿ ಆಸ್ಪತ್ರೆಯಲ್ಲಿ ಕಳೆದ 1 ತಿಂಗಳಿಂದ ಚಿಕಿತ್ಸೆ ನೀಡಲಾಗ್ತಾ ಇತ್ತು. ಇತ್ತೀಚಿಗೆ ಅವರನ್ನ ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 71 ವರ್ಷದ ಶರತ್‌ ಬಾಬು ಚಿತ್ರರಂಗದಲ್ಲಿ 40 ವರ್ಷಗಳನ್ನ ಪೂರೈಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ಸ್ನೇಹಿತರೇ ಶರತ್‌ ಬಾಬು ಅವರ ಜರ್ನಿ ಹೇಗಿತ್ತು ಅಂತ ನೋಡ್ತಾ ಹೋಗೋಣ.
ಶರತ್‌ಬಾಬು ಅವರು ಕನ್ನಡದವ್ರು ಅಂತ ಇವಾಗ್ಲೂ ಕೂಡ ಎಲ್ಲರೂ ಅಂದ್ಕೊಂಡಿದಾರೆ. ಆದ್ರೆ ಶರತ್‌ ಬಾಬು ಅವರು ಮೂಲತಃ ಆಂಧ್ರಪ್ರದೇಶದವರು. ಕನ್ನಡಿಗರಿಗೆ ಶರತ್‌ ಬಾಬು ಅಂತ ತಕ್ಷಣ ನೆನಪಾಗೋದು ಅಮೃತ ವರ್ಷಿಣಿ ಸಿನಿಮಾ. ಈ ಅಮೃತ ವರ್ಷಿಣಿ ಸಿನಿಮಾದಲ್ಲಿ ರಮೇಶ್‌ ಮತ್ತು ಸುಹಾಸಿನಿ ಕೂಡ ನಟಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ಹೆಚ್ಚು ಅಟ್ರ್ಯಾಕ್ಟ್‌ ಮಾಡಿದ್ದು ಮಾತ್ರ ಶರತ್‌ ಬಾಬು. ತಮ್ಮ ಅದ್ಭುತ ನಟನೆ ಮೂಲಕ ಇನ್ನೂ ಕೂಡ ಜನರ ಮನಸ್ಸಿನಲ್ಲಿ ಅಮೃತ ವರ್ಷಿಣಿ ಶರತ್‌ ಬಾಬು ಅಂತಾನೇ ಫೇಮಸ್‌ ಆಗಿದ್ದಾರೆ.

ಮೊದಲು ಸತ್ಯಂ ಬಾಬು ದೀಕ್ಷಿತುಲು ಆಗಿದ್ದ ಇವರು 1951ರಲ್ಲಿ ಆಂಧ್ರಪ್ರದೇಶದ ಅಮದಲವಲಸದಲ್ಲಿ ಜನಿಸ್ತಾರೆ. ಇವರ ತಂದೆ ಹೋಟೆಲ್‌ ಉದ್ಯಮವನ್ನ ನಡೆಸ್ತಾ ಇದ್ರು, ಅವರ ನಂತ್ರ ಹೊಟೇಲ್‌ ಉದ್ಯಮವನ್ನ ಮಗ ಕಂಟಿನ್ಯೂ ಮಾಡಬೇಕು ಅಂತ ಇವರ ತಂದೆಯ ಆಸೆ ಆಗಿತ್ತು, ಆದರೆ ಶರತ್‌ ಬಾಬು ಅವರಿಗೆ ಪೋಲಿಸ್‌ ಆಗಬೇಕು ಅನ್ನೋ ಆಸೆ ಇತ್ತು. ಆದರೆ ಅವರಿಗೆ ಐ ಸೈಟ್‌ ಪ್ರಾಬ್ಲಮ್‌ ಇದ್ದಿದ್ರಿಂದ ಪೋಲಿಸ್‌ ಆಗಬೇಕು ಅನ್ನೊ ಅವರ ಕನಸು ಕನಸಾಗೇ ಉಳಿತು. ನಂತರ ಇವರ ಉಪನ್ಯಾಸಕರು ಸ್ನೇಹಿತರೆಲ್ಲ ನೀನು ನೋಡೋಕೆ ತುಂಬಾ ಚೆನ್ನಾಗಿದ್ದೀಯ ಸಿನಿಮಾಗೆ ಟ್ರೈ ಮಾಡು ಅಂತ ಹೇಳಿದ್ರಂತೆ. ಆದರೆ ಮಗ ಹೀರೋ ಆಗೋದು ತಂದೆಗೆ ಇಷ್ಟ ಇರಲಿಲ್ಲ, ತಾಯಿಯ ಸಪೋರ್ಟ್‌ ಮೂಲಕ ಸಿನಿಮಾ ರಂಗಕ್ಕೆ ಶರತ್‌ ಬಾಬು ಪ್ರವೇಶ ಮಾಡಿದ್ರು. 1973ರಲ್ಲಿ ತೆಲುಗಿನ ರಾಮ್ ರಾಜ್ಯಂ ಸಿನಿಮಾದ ಮೂಲಕ ಶರತ್‌ ಬಾಬು ಬಣ್ಣದ ಲೋಕಕ್ಕೆ ಕಾಲಿಟ್ರು. ತಮ್ಮ ಮೊದಲ ಸಿನಿಮಾದಲ್ಲೇ ಜನಮನ್ನಣೆ ಗಳಿಸಿದ್ರು. ಇದಾದ ಮೇಲೆ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. 1977ರಲ್ಲಿ ಬಿಡುಗಡೆಯಾದ ಕೆ. ಬಾಲಚಂದ್ರನ್‌ ನಿರ್ದೇಶನದ ತಮಿಳಿನ ʼಅವರ್ಗಳ್‌ʼ ಸಿನಿಮಾದ ತೆಲುಗು ರಿಮೇಕ್‌ “ಇದಿ ಕತಾ ಕಾದು” ಇವರಿಗೆ ಮೊದಲ ಬ್ರೇಕ್‌ ಕೊಡ್ತು. ಈ ಸಿನಿಮಾ 1979ರಲ್ಲಿ ಬಿಡುಗಡೆ ಆಗಿತ್ತು, ಈ ಸಿನಿಮಾದಲ್ಲಿ ಚಿರಂಜೀವಿ ಮತ್ತು ಕಮಲ್‌ ಹಾಸನ್‌ ಕೂಡ ಇದ್ರು. ಇದರ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಶರತ್‌ ಬಾಬು ಬ್ಯುಸಿ ಆಗಿ ಬಿಟ್ರು. ಕೇವಲ ತೆಲುಗು ಚಿತ್ರರಂಗ ಮಾತ್ರವಲ್ಲದೇ ತಮಿಳು, ಕನ್ನಡ, ಹಿಂದಿ, ಮಲಯಾಳಂ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿ ಕೊಂಡ್ರು. ಇವರು ಕನ್ನಡದಲ್ಲಿ ತುಳಸಿದಳ, ರಣಚಂಡಿ, ಶಕ್ತಿ, ಅಮೃತ ವರ್ಷಿಣಿ, ನಮ್ಮ ಯಜಮಾನ್ರು, ಬ್ರಂದಾವನ, ಉಷ, ಗಾಯ, ನೀಲ, ಆರ್ಯನ್‌, ಹೃದಯ ಹೃದಯ ಹೀಗೆ ಹಲವಾರು ಸಿನಿಮಾದಲ್ಲಿ ನಟಿಸಿದ್ರು. 1997ರಲ್ಲಿ ಬಿಡುಗಡೆ ಆದ ಅಮೃತ ವರ್ಷಿಣಿ ಸಿನಿಮಾದ ಹೇಮಂತ್‌ ಪಾತ್ರದ ಮೂಲಕ ಕನ್ನಡ ಸಿನಿ ಪ್ರಿಯರಿಗೆ ಬಹಳ ಹತ್ತಿರ ಆದ್ರು.

ಇನ್ನು ಶರತ್‌ ಬಾಬು ಅವರ ವೈವಾಹಿಕ ಜೀವನದ ಬಗ್ಗೆ ನೋಡೋಣ. ಶರತ್‌ ಬಾಬು ಅವರು 2 ಮದುವೆ ಆಗಿದ್ರೂ ಕೂಡ ಸುಮಾರು 10 ವರ್ಷಕ್ಕೂ ಹೆಚ್ಚು ಕಾಲ ಒಬ್ಬಂಟಿಯಾಗಿ ಜೀವನ ನಡೆಸ್ತಾ ಇದ್ರು. ಶರತ್‌ ಬಾಬು ಅವರು ಸಿನಿಮಾ ರಂಗದಲ್ಲಿ ಪೀಕ್‌ನಲ್ಲಿ ಇದ್ದಾಗ್ಲೇ 1974ರಲ್ಲಿ ನಟಿ ರಮಾ ಪ್ರಭಾ ಅವರನ್ನ ಮೊದಲು ಮದುವೆ ಆಗಿದ್ರು. 14 ವರ್ಷಗಳ ಕಾಲ ಸಂಸಾರ ನಡೆಸಿ 1988ರಲ್ಲಿ ಡಿವೋರ್ಸ್‌ ಪಡೆದುಕೊಂಡ್ರು. ನಂತರ ಮಲಯಾಳಿ ನಟಿ ಸ್ನೇಹ ನಂಬಿಯರ್‌ ಜೊತೆ ಸಿನಿಮಾ ಮಾಡ್ತಾ ಮಾಡ್ತಾ ಅವರಿಬ್ಬರ ನಡುವೆ ಇದ್ದ ಸ್ನೇಹ ಪ್ರೀತಿಗೆ ತಿರುಗಿ ಮದುವೆ ಆಗೋಕೆ ನಿರ್ಧಾರ ಮಾಡಿದ್ರು. ನಂತರ ಸ್ನೇಹ ನಂಬಿಯರ್‌ ಅವರನ್ನ 1990ರಲ್ಲಿ ಮದುವೆ ಆದ್ರು. ಅಂತಿಮವಾಗಿ 2011ರಲ್ಲಿ ಸ್ನೇಹ ನಂಬಿಯಾರ್‌ ಜೊತೆ ಕೂಡ ಡಿವೋರ್ಸ್‌ ಆಯ್ತು. ಶರತ್‌ ಬಾಬು ಮಾನಸಿಕವಾಗಿ ನನಗೆ ಕಿರುಕುಳ ಕೊಡ್ತಾ ಇದಾರೆ ಅಂತ ಅವರ ಹೆಂಡತಿ ಸ್ನೇಹ ನಂಬಿಯಾರ್‌ ಅರೋಪಿಸಿ ಡಿವೊರ್ಸ್‌ ಪಡ್ಕೊಂಡಿದ್ರು. ಈ ಸುದ್ದಿ ಆಗ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು ಎಲ್ಲಾ ಮಾಧ್ಯಮಗಳಲ್ಲೂ ಕೂಡ ಇದೇ ಸುದ್ದಿ ಹೈಲೈಟ್‌ ಆಗಿತ್ತು.

ಇನ್ನು ಶರತ್‌ ಬಾಬು ಅವರಿಗೆ ತೆಲುಗು ಚಿತ್ರಗಳಲ್ಲಿನ ಪಾತ್ರಕ್ಕಾಗಿ ಆಂಧ್ರ ಪ್ರದೇಶ ಸರ್ಕಾರದಿಂದ 3 ನಂದಿ ಪ್ರಶಸ್ತಿಗಳನ್ನ ಪಡೆದಿದ್ದಾರೆ. ತಮಿಳಿನ ಮಲಯನ್‌ ಸಿನಿಮಾದ ನಟನೆಗಾಗಿ ಬೆಸ್ಟ್‌ ಕ್ಯಾರೆಕ್ಟರ್‌ ಆರ್ಟಿಸ್ಟ್‌ ಸ್ಟೇಟ್‌ ಅವಾರ್ಡ್‌ ಕೂಡ ಸಿಕ್ಕಿದೆ. ನಟನಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇವರ ಕೊನೆಯ ಚಿತ್ರ ತೆಲುಗಿನ ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ಅಭಿನಯದ “ಮಳ್ಳಿ ಪೆಳ್ಳಿ.”

ಸ್ನೇಹಿತರೇ ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ ಶರತ್‌ ಬಾಬು ಅವರಿಗೆ ಕನ್ನಡದಲ್ಲಿ ಯಾವುದೇ ಪ್ರಶಸ್ತಿ ಸಿಗದೇ ಇರಬೋದು ಆದ್ರೆ ಅಮೃತ ವರ್ಷಿಣಿ ಸಿನಿಮಾದ ಹೇಮಂತ್‌ ಪಾತ್ರ ಜನರನ್ನ ತಲುಪಿರುವ ರೀತಿಗೆ ಯಾವ ಪ್ರಶಸ್ತಿಯೂ ಸರಿಸಾಟಿ ಅಲ್ಲ.

Contact Us for Advertisement

Leave a Reply