ಧೋನಿ ಗುಣಗಾನ ಮಾಡಿದ ನಟಿ ಜೂಹಿ ಚಾವ್ಲಾ!

masthmagaa.com:

ಭಾರತ ತಂಡದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಾಯಕ, ಮಹೇಂದ್ರ ಸಿಂಗ್ ಧೋನಿ ಅಂದ್ರೆ ಅದು ಅವರ ಅಭಿಮಾನಿಗಳಿಗೆ ಕೇವಲ ಹೆಸರಲ್ಲ, ಒಂದು ರೀತಿಯ ಎಮೋಷನ್‌. ಈಡನ್ ಗಾರ್ಡನ್ಸ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಮ್ಯಾಚ್‌ನಲ್ಲಿ ಪ್ರೇಕ್ಷಕರು “ಧೋನಿ ಧೋನಿ” ಎಂದು ಘೋಷಣೆಗಳನ್ನು ಕೂಗಿದ್ದಾರೆ.

ಕೋಲ್ಕತ್ತಾ ಕೆಕೆಆರ್‌ನ ಹೋಮ್‌ ಆಗಿರೋದ್ರಿಂದ, ಕೋಲ್ಕತ್ತಾಗೇ ಜಾಸ್ತಿ ಪ್ಯಾನ್ಸ್‌ ಇರ್ತಾರೆ ಅಂತ ಅಂದ್ಕೊಂಡಿದ್ರು, ಆದರೆ ಅದು ಸುಳ್ಳಾಗಿದೆ. ಕೆಕೆಆರ್‌ ಪರ ಅಭಿಮಾನಿಗಳು ಇದ್ರೂ ಕೂಡ ಧೋನಿ ಮೇಲೆ ಜನರ ಪ್ರೀತಿ ಜಾಸ್ತಿ ಇತ್ತು. ಭಾನುವಾರ ( ಎಪ್ರಿಲ್‌ 23) ನಡೆದ ಐಪಿಎಲ್‌ ಮ್ಯಾಚ್‌ನಲ್ಲಿ ಸಿಎಸ್‌ಕೆ 49 ರನ್‌ಗಳ ಅಂತರದಿಂದ ಕೆಕೆಆರ್ ತಂಡವನ್ನು ಸೋಲಿಸಿತು. ಕೆಕೆಆರ್‌ನ ಸಹ-ಮಾಲಕಿ ಜೂಹಿ ಚಾವ್ಲಾ ಕೂಡ ಪ್ರೇಕ್ಷಕರು ಧೋನಿ ಮತ್ತು ಸಿಎಸ್‌ಕೆ ಮೇಲೆ ಇರುವ ಪ್ರೀತಿಯನ್ನ ನೋಡಿ ತುಂಬಾ ಖುಷಿಪಟ್ರು. ಅಲ್ಲದೇ ಧೋನಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು, “ಇಂದು ಸಿಎಸ್‌ಕೆ ತುಂಬಾ ಚೆನ್ನಾಗಿ ಆಡಿದೆ. ಅದರಲ್ಲೂಎಮ್‌.ಎಸ್‌ ಧೋನಿಯರು ನಾಯಕನಾಗಿ ಆಡೋದನ್ನ ನೋಡೋಕೆ ಖುಷಿ ಆಗತ್ತೆ .” ಅಂತ ಧೋನಿಯವರನ್ನ ಹಾಡಿ ಹೊಗಳಿದ್ದಾರೆ.

-masthmagaa.com

Contact Us for Advertisement

Leave a Reply