ಕೊಹ್ಲಿ ಮಗಳನ್ನ ಡೇಟ್ ಗೆ ಕರೆದ ಅಭಿಮಾನಿಯ ವಿರುದ್ಧ ರೊಚ್ಚಿಗೆದ್ದ ನಟಿ ಕಂಗನಾ!

masthmagaa.com:

ಕೆಲವು ದಿನಗಳ ಹಿಂದೆ ಐಪಿಎಲ್ ಪಂದ್ಯದ ವೇಳೆ ಬಾಲಕನೊಬ್ಬ ಹಿಡಿದಿದ್ದ ಬೋರ್ಡ್‌ ಸಖತ್‌ ವೈರಲ್‌ ಆಗಿತ್ತು. ಈ ವೈರಲ್ ಫೋಟೊಗೆ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ. ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಆರ್‌ಸಿಬಿ ಮ್ಯಾಚ್‌ ಟೈಮಲ್ಲಿ ವಿರಾಟ್ ಕೊಹ್ಲಿಗೆ ಬಾಲಕನೊಬ್ಬ ಬೋರ್ಡ್‌ ಹಿಡಿದಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಕತ್‌ ವೈರಲ್‌ ಆಗಿತ್ತು. ಬೋರ್ಡ್‌ ಹಿಡಿದ ಮಗು ವಿರಾಟ್ ಮತ್ತು ಅನುಷ್ಕಾ ಶರ್ಮಾ ಅವರಿಗೆ ವಿಶೇಷ ವಿನಂತಿಯನ್ನು ಮಾಡಿದ್ದ. ಬೋರ್ಡ್‌ನಲ್ಲಿ “ಹಾಯ್ ವಿರಾಟ್ ಅಂಕಲ್. ನಾನು ವಾಮಿಕಾ ಅವರನ್ನು ಡೇಟ್‌ಗೆ ಕರೆದುಕೊಂಡು ಹೋಗಬಹುದೇ?” ಎಂದು ಬರೆದಿದ್ದ. ಇದೇ ಫೋಟೊಗೆ ಕಂಗನಾ ರಣಾವತ್‌ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ಮುಗ್ಧ ಮಕ್ಕಳಿಗೆ ಈ ರೀತಿ ಅವರ ವಯಸ್ಸನ್ನ ಮೀರಿದ ವಿಷಯಗಳನ್ನ ಕಲಿಸಬೇಡಿ. ಬಹುಶಃ ಈ ರೀತಿ ಮಾಡೋದರಿಂದ ನಿಮ್ಮನ್ನ ನೀವು ಮಾಡರ್ನ್ ಅಥವಾ ಕೂಲ್ ಅಂತ ಭಾವಿಸಬಹುದು, ಆದ್ರೆ ವಾಸ್ತವದಲ್ಲಿ ಇದು ಅಶ್ಲೀಲ ಮತ್ತು ನಿಮ್ಮ ದಡ್ಡತನವನ್ನ ಪ್ರದರ್ಶಿಸುತ್ತದೆ”. ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ

ಇನ್ನು ಕಂಗನಾ ಅವರ ಈ ಟ್ವೀಟ್‌ಗೆ ಸಾಲು ಸಾಲು ಪಾಸಿಟೀವ್‌ ಕಾಮೆಂಟ್‌ಗಳು ಬರ್ತಾ ಇದೆ. ನೀವ್‌ ಹೇಳ್ತಾ ಇರೋದು ಸರಿ ಇದೆ. ಅಷ್ಟು ಸಣ್ಣ ಮಕ್ಕಳಿಗೆ ನಾವು ಈ ರೀತಿಯ ಬುದ್ಧಿಯನ್ನ ಕಲಿಸಬಾರದು ಅಂತ ಕಾಮೆಂಟ್‌ ಮಾಡ್ತಾ ಇದಾರೆ.

-masthmagaa.com

Contact Us for Advertisement

Leave a Reply