ಗೌತಮ್ ಅದಾನಿ ಮತ್ತೊಮ್ಮೆ 100 ಬಿಲಿಯನ್‌ ಡಾಲರ್‌ ಒಡೆಯ!‌

Masthmagaa.com:

ಕಳೆದ ವರ್ಷ ಹಿಂಡನ್‌ಬರ್ಗ್‌ ವರದಿಯಿಂದ ಕುಸಿದು ಬಿದ್ದಿದ್ದ ಭಾರತದ ನಂ.1 ಶ್ರೀಮಂತ ಗೌತಮ್‌ ಅದಾನಿ ಈಗ ಬೌನ್ಸ್‌ ಬ್ಯಾಕ್‌ ಮಾಡಿದ್ದಾರೆ. ಸುಮಾರು 13 ತಿಂಗಳ ನಂತರ ಅದಾನಿ ಮತ್ತೆ 100 ಬಿಲಿಯನ್‌ ಡಾಲರ್‌ ದೊಡ್ಡಕುಳಗಳ ಪಟ್ಟಿಗೆ ಸೇರಿದ್ದಾರೆ. ಗೌತಮ್‌ ಅದಾನಿಯ ಒಟ್ಟು ಸಂಪತ್ತು ಇದೀಗ 100 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 8.3 ಲಕ್ಷ ಕೋಟಿ ರೂಪಾಯಿ ಗಡಿ ದಾಟಿದೆ. ಕಳೆದ ವಾರ ಅದಾನಿ ಸಮೂಹ ಕಂಪನಿ 130% ಭರ್ಜರಿ ಲಾಭ ತೋರಿಸಿತ್ತು. ಇದ್ರ ಬೆನ್ನಲ್ಲೇ ಸತತ 8 ದಿನ ಅದಾನಿ ಶೇರುಗಳು ಏರಿಕೆ ಕಾಣ್ತಿವೆ. ನೆನ್ನೆ ಅಂದ್ರೆ ಫೆಬ್ರುವರಿ 7ರ ಒಂದೇ ದಿನ ಅದಾನಿಯವ್ರ ನೆಟ್‌ ವರ್ತ್‌ನಲ್ಲಿ 2.7 ಬಿಲಿಯನ್‌ ಡಾಲರ್‌ ಅಂದ್ರೆ 22.4 ಸಾವಿರ ಕೋಟಿ ರೂಪಾಯಿ ಹಿಗ್ಗಿದೆ. ಈ ಮೂಲಕ ಜಗತ್ತಿನ ಆಗರ್ಭ ಶ್ರೀಮಂತರ ಲಿಸ್ಟ್‌ನಲ್ಲಿ ಗೌತಮ್‌ ಅದಾನಿ 12ನೇ ಸ್ಥಾನಕ್ಕೇರಿದ್ದಾರೆ. ಅವರ ಮೇಲೆ ರಿಲಾಯನ್ಸ್‌ ಮುಖ್ಯಸ್ಥ ಅಂಬಾನಿ 11ನೇ ಸ್ಥಾನದಲ್ಲಿದ್ದಾರೆ. ಈ ವಿಚಾರವನ್ನ ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ ರಿಪೋರ್ಟ್‌ ತಿಳಿಸಿದೆ. ಅಂದ್ಹಾಗೆ 2023ರ ಜನವರಿಯಲ್ಲಿಅದಾನಿ ಸಮೂದ ತನ್ನ ಷೇರಿನ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದೆ ಅಂತ ಹಿಂಡನ್‌ಬರ್ಗ್‌ ವರದಿ ಪ್ರಕಟಿಸಿತ್ತು. ಬಳಿಕ ವಿವಿಧ ಅದಾನಿ ಕಂಪನಿಗಳ ಷೇರು ಮೌಲ್ಯದಲ್ಲಿ ತೀವ್ರ ಕುಸಿತವಾಗಿ ಸುಮಾರು 100 ಶತಕೋಟಿ ಡಾಲರ್‌ ಸಂಪತ್ತು ಕರಗಿತ್ತು. ಪ್ರಕರಣದ ತನಿಖೆಗೆ ಆಗ್ರಹಿಸಿ ಹಲವು ಅರ್ಜಿಗಳು ಕೂಡ ಸಲ್ಲಿಕೆಯಾಗಿದ್ವು. ಈ ವಿಚಾರವಾಗಿ ಸೆಬಿ ತನಿಖೆ ನಡೆಸಿತ್ತು. ನಂತ್ರ 2024ರ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ ಕೊನೆಗೂ ಅದಾನಿ ಪರ ತೀರ್ಪು ನೀಡ್ತು. ಇದಾದ ನಂತ್ರ ಇದೀಗ ಅದಾನಿಯ ಸಂಪತ್ತಿನಲ್ಲಿ ಭಾರೀ ಚೇತರಿಕೆ ಕಂಡುಬಂದಿದೆ.

-Masthmagaa.com

Contact Us for Advertisement

Leave a Reply