ತಾಲಿಬಾನಿಗಳ ಪ್ರತಿ ಹೆಜ್ಜೆಗೂ ಪಾಕ್ ನಿರ್ದೇಶನ: ಅಮರುಲ್ಲಾ ಸಾಲೇ

masthmagaa.com:

ತಾಲಿಬಾನಿಗಳಿಗೆ ಪಾಕಿಸ್ತಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್​ಐ ಎಲ್ಲಾ ರೀತಿಯ ಮಾರ್ಗದರ್ಶನ ನೀಡ್ತಿದೆ ಅಂತ ಅಪ್ಘಾನಿಸ್ತಾನದ ಉಪಾಧ್ಯಕ್ಷ ಅಮರುಲ್ಲಾ ಸಾಲೇ ಹೇಳಿದ್ದಾರೆ. ತಾಲಿಬಾನ್ ವಕ್ತಾರರು ಪ್ರತಿ ಗಂಟೆಗೊಮ್ಮೆ ಪಾಕಿಸ್ತಾನದ ರಾಯಭಾರಿ ಕಚೇರಿಯಿಂದ ನಿರ್ದೇಶನ ಪಡೀತಿದ್ದಾರೆ. ತಾಲಿಬಾನಿಗಳು ಅಫ್ಘಾನಿಸ್ತಾನದ ಪ್ರದೇಶದ ಮೇಲೆ ಕಂಟ್ರೋಲ್ ಸಾಧಿಸಿರಬಹುದು. ಆದ್ರೆ ಅವರು ಜನತೆಯ ಮನಸ್ಸು ಗೆದ್ದಿಲ್ಲ ಅಂತ ಅಮರುಲ್ಲಾ ಸಾಲೇ ಹೇಳಿದ್ದಾರೆ. ಜೊತೆಗೆ ವಿಶ್ವಸಂಸ್ಥೆಗೆ ಪತ್ರ ಬರೆದಿರೋ ಅವರು, ಆರ್ಥಿಕ ನಿರ್ಬಂಧಗಳಿಂದಾಗಿ ಪಂಜ್​ಶಿರ್​​ ಪ್ರಾಂತ್ಯ ಮತ್ತು ಬಗ್ಲನ್​​​ ಪ್ರಾಂತ್ಯ ಮೂರು ಜಿಲ್ಲೆಗಳಲ್ಲಿ ಮಾನವೀಯ ಬಿಕ್ಕಟ್ಟು ಎದುರಾಗಿದೆ. ಅಂತಾರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆ ಈಗಿಂದೀಗಲೇ ಮಧ್ಯಪ್ರವೇಶಿಸಿ ತಾಲಿಬಾನಿಗಳ ಅತಿಕ್ರಮಣ ತಡೀಬೇಕು. ಮತ್ತು ರಾಜಕೀಯ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಬೇಕು ಅಂತ ಮನವಿ ಮಾಡಿದ್ದಾರೆ. ಒಂದ್ವೇಳೆ ಈ ಕೂಡಲೇ ಹೆಜ್ಜೆ ಇಡದೇ ಇದ್ರೆ ದೊಡ್ಡ ಮಟ್ಟದ ನರಮೇಧವೇ ನಡೆದುಹೋಗಲಿದೆ ಅಂತ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply