ನಾಗ್ಪುರದಿಂದ ಅಫ್ಘಾನಿಸ್ತಾನಕ್ಕೆ ಹೋದವನು ಈಗ ತಾಲಿಬಾನ್ ಫೈಟರ್​..!?

masthmagaa.com:

ಮಹಾರಾಷ್ಟ್ರದ ನಾಗ್ಪುರದಿಂದ ಗಡೀಪಾರಾಗಿದ್ದ ಆಫ್ಘನ್ ವ್ಯಕ್ತಿಯೊಬ್ಬ ತಾಲಿಬಾನ್ ಸೇರಿರೋ ಶಂಕೆ ವ್ಯಕ್ತವಾಗಿದೆ. ಆತ ಬಂದೂಕು ಹಿಡಿದು ನಿಂತಿರೋ ಫೋಟೋ ಫುಲ್ ವೈರಲ್ ಆಗಿದೆ. ನೂರ್ ಮೊಹ್ಮದ್ ಎಂಬ ಹೆಸರಿನ ಈ ವ್ಯಕ್ತಿ ದಾಖಲೆ ಇಲ್ಲದೇ ಇಲ್ಲಿ ವಾಸವಾಗಿದ್ದ. ಹೀಗಾಗಿ ಆತನನ್ನು ಅರೆಸ್ಟ್ ಮಾಡಿ, ಅಫ್ಘಾನಿಸ್ತಾನಕ್ಕೆ ಗಡೀಪಾರು ಮಾಡಲಾಗಿತ್ತು. ಅಲ್ಲಿ ಆತ ಏನ್ ಮಾಡ್ತಿದ್ದಾರೆ ಅಂತ ಗೊತ್ತಿಲ್ಲ. ಈಗ ಆತನದ್ದೇ ಎನ್ನಲಾದ ಫೋಟೋ ಒಂದು ವೈರಲ್ ಆಗ್ತಿದೆ. ಆದ್ರೆ ಫೋಟೋದಲ್ಲಿರೋದು ಆತನೇ ಅಂತ ಹೇಳೋದು ಕೂಡ ಸಾಧ್ಯವಿಲ್ಲ ಅಂತ ನಾಗ್ಪುರ ಪೊಲೀಸರು ತಿಳಿಸಿದ್ಧಾರೆ.

-masthmagaa.com

Contact Us for Advertisement

Leave a Reply