ಕಾಬೂಲ್​​ನಲ್ಲಿ ಅಮೆರಿಕ ಏರ್​​ಸ್ಟ್ರೈಕ್​! ಮತ್ತೆ ದಾಳಿಗೆ ಹೊರಟ ಉಗ್ರ ಫಿನಿಶ್!

masthmagaa.com:

ಅಫ್ಘಾನಿಸ್ತಾನದ ಕಾಬೂಲ್ ಏರ್​​ಪೋರ್ಟ್ ಬಳಿ ಅಮೆರಿಕ ಸೇನೆ ಏರ್​​​ಸ್ಟ್ರೈಕ್ ನಡೆಸಿದೆ. ಇದ್ರಲ್ಲಿ ಕಾಬೂಲ್ ಏರ್​​ಪೋರ್ಟ್​​​ನಲ್ಲಿ ದಾಳಿ ನಡೆಸಲು ಕಾರ್​ನಲ್ಲಿ ಸ್ಫೋಟಕ ತುಂಬಿಕೊಂಡು ಹೊರಟಿದ್ದ ಆತ್ಮಾಹುತಿ ದಾಳಿಕೋರರನ್ನು ಹೊಡೆದುರುಳಿಸಲಾಗಿದೆ ಅಂತ ಅಮೆರಿಕ ಸೇನೆ ಮತ್ತು ತಾಲಿಬಾನ್ ವಕ್ತಾರ ಝೈಬುಲ್ಲಾ ಮೊಹ್ಮದ್ ಮಾಹಿತಿ ನೀಡಿದ್ದಾರೆ. ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್​​​ ಮುಂದಿನ 24ರಿಂದ 36 ಗಂಟೆಯೊಳಗೆ ಮತ್ತೊಂದು ದಾಳಿ ನಡೆಯೋ ಸಾಧ್ಯತೆ ಇದೆ. ಈ ಬಗ್ಗೆ ನನಗೆ ಕಮಾಂಡರ್​​ಗಳು ಮಾಹಿತಿ ನೀಡಿದ್ದಾರೆ. ಏರ್​ಪೋರ್ಟ್​ ಬಳಿ ತುಂಬಾ ಡೇಜರಸ್ ಪರಿಸ್ಥಿತಿ ಇದೆ ಅಂತ ಎಚ್ಚರಿಸಿದ್ರು. ತಾಲಿಬಾನಿಗಳು ಕೂಡ ಕಾಬೂಲ್ ಏರ್​ಪೋರ್ಟ್ ಹತ್ರ ದಾಳಿ ನಡೆಯೋ ಸಾಧ್ಯತೆ ತುಂಬಾ ಇದೆ. ಯಾರೂ ಆ​​ ಕಡೆಗೆ ಬರಬೇಡಿ ಅಂತ ಎಚ್ಚರಿಸಿದ್ರು. ಅದ್ರ ಬೆನ್ನಲ್ಲೇ ಅಮೆರಿಕ ಸೇನೆ ದಾಳಿಗೆ ಹೊರಟಿದ್ದ ಉಗ್ರನನ್ನು ಟಾರ್ಗೆಟ್ ಮಾಡಿದೆ. ಮೊನ್ನೆ ಗುರುವಾರ ಕೂಡ ಕಾಬೂಲ್ ಏರ್​ಪೋರ್ಟ್​ ಬಳಿ ನಡೆದ ದಾಳಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳ್ಕೊಂಡಿದ್ರು. ಇದ್ರಲ್ಲಿ ಅಮೆರಿಕದ 13 ಮಂದಿ ಯೋಧರೂ ಉಸಿರು ಚೆಲ್ಲಿದ್ರು. ಅದಕ್ಕೆ ಪ್ರತೀಕಾರವಾಗಿ ಅಮೆರಿಕ ಐಎಸ್​ಕೆ ಸಂಘಟನೆಯ ಇಬ್ಬರು ಉಗ್ರರನ್ನು ಡ್ರೋನ್ ಸ್ಟ್ರೈಕ್​ನಲ್ಲಿ ಹೊಡೆದುರುಳಿಸಿತ್ತು.

-masthmagaa.com

Contact Us for Advertisement

Leave a Reply