ಬೆಂಗಳೂರಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆಫ್ರಿಕನ್ ಪ್ರಜೆಗಳು!

masthmagaa.com:

ಮಾದಕ ವಸ್ತು ಸಂಗ್ರಹ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವನ್ನಪ್ಪಿದ ಹಿನ್ನೆಲೆ ಬೆಂಗಳೂರಿನ ಜೆಸಿ ನಗರ ಪೊಲೀಸ್​ ಠಾಣೆ ಮುಂದೆ ಇವತ್ತು ಆಫ್ರಿಕನ್ ಪ್ರಜೆಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಅನ್ನೋಕ್ಕಿಂತ ಒಂದ್​ರೀತಿ ಪೊಲೀಸರಿಗೆ ಆವಾಜ್​ ಹಾಕ್ತಾ, ಹೊಡೆಯೋಕೆ ಹೋದ ಘಟನೆ ಎಲ್ಲಾ ನಡೆದಿದೆ. ಈ ವೇಳೆ ಕೆಲವರಂತೂ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು ಆಫ್ರಿಕನ್ ಪ್ರಜೆಗಳ ಮೇಲೆ ಲಾಠಿ ಚಾರ್ಜ್​ ಮಾಡಿ ಗುಂಪನ್ನ ಚದುರಿಸಿದ್ದಾರೆ. ಈ ವೇಳೆ ಒಂದಷ್ಟು ಆಫ್ರಿಕನ್ ಪ್ರಜೆಗಳಿಗೆ ಗಾಯಗಳಾಗಿವೆ. ಕೆಲವರನ್ನ ಆಟೋಗಳಿಗೆ ತುಂಬಿ ಆಸ್ಪತ್ರೆಗೆ ಸಾಗಿಸಲಾಯ್ತು. ಹಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ಮಾದಕವಸ್ತು ಡೆಲಿವರಿಗೆ ಸಂಬಂಧಿಸಿದಂತೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕೆಲವರು ಅಲ್ಲಿಂದ ಓಡಿ ಹೋಗಿದ್ರು. ಓರ್ವನನ್ನ ಪೊಲೀಸರು ವಿಚಾರಣೆಗೆ ಕರ್ಕೊಂಡ್​ ಬಂದಿದ್ರು. ನಂತ್ರ ಆತ ಎದೆ ನೋವು ಅಂತ ಹೇಳಿದ್ದಕ್ಕೆ ಆಸ್ಪತ್ರೆಗೆ ದಾಖಲಿಸಲಾಯ್ತು. ಕೊನೆಗೆ ಆತ ಮೃತಪಟ್ಟಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಪೊಲೀಸರ ವಶದಲ್ಲಿ ಮೃತಪಟ್ಟವನ ವೀಸಾ 2015ರಲ್ಲೇ ಮುಗಿದಿತ್ತು, ಪಾಸ್​ಪೋರ್ಟ್​ 2017ರಲ್ಲೇ ಮುಗಿದಿತ್ತು ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇನ್ನು ಪೊಲೀಸರ ಮೇಲೆ ವಿದೇಶಿ ಪ್ರಜೆಗಳು ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡ್ತೀವಿ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply