ಜೂನ್ 14ರ ಬಳಿಕ ಹಂತ ಹಂತವಾಗಿ ಅನ್​ಲಾಕ್​: ಆರ್​.ಅಶೋಕ್​​

masthmagaa.com:

ಜೂನ್ 14ರ ಬಳಿಕ ಹಂತ ಹಂತವಾಗಿ ಲಾಕ್​ಡೌನ್ ತೆರವುಗೊಳಿಸಲಾಗುತ್ತೆ ಅಂತ ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಕ್​ಡೌನ್ ಒಂದೇ ಸಲ ತೆರೆಯಲಾಗುತ್ತೆ ಅಂತ ಜನ ಭಾವಿಸಬಾರದು. ಯಾಕಂದ್ರೆ ಒಂದೇ ಸಲ ಲಾಕ್​ಡೌನ್ ತೆರೆದ್ರೆ ಸೋಂಕು ಹೆಚ್ಚಾಗೋ ಸಾಧ್ಯತೆ ಇರುತ್ತೆ. ಹೀಗಾಗಿ ಹಂತ ಹಂತವಾಗಿ ಲಾಕ್​ಡೌನ್ ತೆರವುಗೊಳಿಸಲಾಗುತ್ತೆ. ಮೊದಲ ಹಂತದಲ್ಲಿ ಯಾವ ವಲಯಗಳಿಗೆ ವಿನಾಯ್ತಿ ನಿಡಬೇಕು ಅನ್ನೋ ಬಗ್ಗೆ ಚರ್ಚೆ ನಡೀತಾ ಇದೆ. ಮೊದಲ ಹಂತದಲ್ಲಿ ಅಗತ್ಯ ವಸ್ತು ಖರೀದಿಗೆ 6ರಿಂದ 10 ಗಂಟೆ ತನಕ ಇರೋ ಅವಕಾಶವನ್ನು 12 ಗಂಟೆವರೆಗೆ ವಿಸ್ತರಣೆ ಮಾಡೋದು ಮತ್ತು ಪಾರ್ಕ್​​ಗಳಲ್ಲಿ ವಾಕಿಂಗ್​ ಅವಕಾಶ ನೀಡೋದು ಹೀಗೆ ಕೆಲವೊಂದಕ್ಕೆ ಅವಕಾಶ ನೀಡೋ ಬಗ್ಗೆ ಯೋಚ್ನೆ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ. ಜೊತೆಗೆ ಯಾವ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆಯಿರುತ್ತದೆಯೋ ಅಲ್ಲಿ ಹಂತಹಂತವಾಗಿ ಅನ್ ಲಾಕ್ ಮಾಡಲಾಗುತ್ತೆ. ಅಂತರ ಜಿಲ್ಲೆ, ಸಾರಿಗೆ ವ್ಯವಸ್ಥೆ ಓಡಾಟ ಆರಂಭ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.. ಸಿಎಂ ಯಡಿಯೂರಪ್ಪ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply