ಭಾರತ್​ ಬಯೋಟೆಕ್​ನ ‘ಕೋವಾಕ್ಸಿನ್​’ ಲಸಿಕೆಗೂ ತಜ್ಞರ ಸಮಿತಿ ಒಪ್ಪಿಗೆ

masthmagaa.com:

ನಿನ್ನೆಯಷ್ಟೇ ಆಕ್ಸ್​ಫರ್ಡ್​ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಸೇರಿ ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್​’ ಲಸಿಕೆಗೆ ಅನುಮತಿ ನೀಡಲು ಶಿಫಾರಸು ಮಾಡಿದ್ದ ವಿಷಯ ತಜ್ಞರ ಸಮಿತಿ (Subject Expert Committee-SEC) ಇವತ್ತು ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್​’ ಲಸಿಕೆಗೂ ಅನುಮತಿ ನೀಡಲು ಶಿಫಾರಸು ಮಾಡಿದೆ. ಆದ್ರೆ ಈ ಎರಡೂ ಲಸಿಕೆ ಬಗ್ಗೆ ಫೈನಲ್ ಕಾಲ್ ಅಥವಾ ಅಂತಿಮ ನಿರ್ಧಾರ​ ತೆಗೆದುಕೊಳ್ಳೋದು ಭಾರತದ ಔಷಧ ನಿಯಂತ್ರಣ ನಿರ್ದೇಶನಾಲಯ (Drugs Controller General of India-DCGI). DCGI ಅನುಮೋದನೆ ಕೊಟ್ಟ ಕೂಡಲೇ ದೇಶದಲ್ಲಿ ಕೊರೋನಾ ಲಸಿಕೆ ಹಾಕುವ ಕಾರ್ಯಕ್ರಮ ಕೂಡ ಆರಂಭವಾಗುತ್ತೆ. ಸೋ ಈಗ ಎಲ್ಲರ ದೃಷ್ಟಿ DCGI ಮೇಲೆ ನೆಟ್ಟಿದೆ.

-masthmagaa.com

Contact Us for Advertisement

Leave a Reply