ಭಾರತದ ಪೋಸ್ಟ್‌ಗಳನ್ನ ತಡೆಹಿಡಿದ `X’! ಚುನಾವಣಾ ಆಯೋಗ ಆದೇಶ!

masthmagaa.com:

ಎಲಾನ್‌ ಮಸ್ಕ್‌ರ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ X ಇದೀಗ ಭಾರತದ ಕೆಲ ಪೋಸ್ಟ್‌ಗಳನ್ನ ತಡೆಹಿಡಿದಿದೆ. ದೇಶದ ಚುನಾಯಿತ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮಾಡಿದಂತಹ ಚುನಾವಣಾ ಭಾಷಣವನ್ನ ಈ ಪೋಸ್ಟ್‌ಗಳು ಹೊಂದಿದ್ವು. ಇವುಗಳನ್ನ ತಡೆಹಿಡಿಯುವಂತೆ ಭಾರತದ ಚುನಾವಣಾ ಆಯೋಗ ʻXʼಗೆ ಆದೇಶ ನೀಡಿದೆ ಅಂತ ಖುದ್ದು ʻXʼ ಮಾಹಿತಿ ನೀಡಿದೆ. ಆದ್ರೆ ʻಚುನಾವಣಾ ಆಯೋಗದ ಈ ಆದೇಶವನ್ನ ನಾವು ಒಪ್ಪಲ್ಲ. ಹಾಗೂ ಇವೆನೆಲ್ಲಾ ವಾಪಸ್‌ ಪಬ್ಲಿಷ್‌ ಮಾಡಬೇಕು ಅಂತ ಚುನಾವಣಾ ಆಯೋಗಕ್ಕೆ ಕೇಳಿಕೊಳ್ತೀವಿʼ ಅಂತೇಳಿದೆ. ಅತ್ತ ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಡಿದ್ದ ಪೋಸ್ಟ್‌ಗಳನ್ನ ಯಾಕೆ ಡಿಲೀಟ್‌ ಮಾಡೋಕೆ ಹೇಳಿದ್ದೀರಿ ಅಂತ ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡಿದೆ.

-masthmagaa.com

Contact Us for Advertisement

Leave a Reply