ಫ್ರಾನ್ಸ್‌ ನಂತರ ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ UPI ಲಾಂಚ್‌!

masthmagaa.com:

ಇತ್ತೀಚೆಗಷ್ಟೇ ಫ್ರಾನ್ಸ್‌ನಲ್ಲಿ ಭಾರತದ UPI (Unified Payment Interface) ಪೇಮೆಂಟ್ ಸಿಸ್ಟಮ್‌ ಲಾಂಚ್‌ ಮಾಡಲಾಗಿತ್ತು. ಇದ್ರ ಬೆನ್ನಲ್ಲೇ ಶ್ರೀಲಂಕಾ ಮತ್ತು ಮಾರಿಷಸ್‌ ಕೂಡ UPI ಸಿಸ್ಟಮ್‌ನ್ನ ಅಳವಡಿಸಿಕೊಳ್ಳೋಕೆ ಮುಂದಾಗಿವೆ. ಜೊತೆಗೆ ರುಪೇ ಕಾರ್ಡ್‌ ಸರ್ವೀಸ್‌ ಕೂಡ ಲಾಂಚ್‌ ಮಾಡಲಿವೆ. ಫೆಬ್ರುವರಿ 12 ರಂದು ನಡೆಯಲಿರೋ ಕಾರ್ಯಕ್ರಮದಲ್ಲಿ ಪಿಎಂ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗಿಯಾಗಿ ಈ ಸೇವೆಗಳನ್ನ ಲಾಂಚ್‌ ಮಾಡಲಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಮತ್ತು ಮಾರಿಷಸ್‌ನ ಪ್ರಧಾನಿ ಪ್ರವಿಂದ್‌ ಜುಗ್ನಾಥ್‌ ಅವ್ರು ಈ ಕಾನ್ಫರೆನ್ಸ್‌ನಲ್ಲಿ ಜಾಯಿನ್‌ ಆಗಲಿದ್ದಾರೆ. ಅಂದ್ಹಾಗೆ ಭಾರತದ ಈ ಪ್ರಮುಖ ಸರ್ವೀಸ್‌ಗಳು ಲಾಂಚ್‌ ಆಗೋದ್ರಿಂದ ಶ್ರೀಲಂಕಾ ಮತ್ತು ಮಾರಿಷಸ್‌ಗೆ ಪ್ರಯಾಣಿಸೋ ಭಾರತೀಯರಿಗೆ ಹೆಲ್ಪ್‌ ಆಗಲಿದೆ. ಅಷ್ಟೇ ಅಲ್ದೇ ಈ ಎರಡು ದೇಶಗಳಿಂದ ಭಾರತಕ್ಕೆ ಬರೋರಿಗೂ ಸಹಾಯ ಆಗಲಿದೆ.

-masthmagaa.com

Contact Us for Advertisement

Leave a Reply