ಯುರೋಪಿಯನ್ ಯೂನಿಯನ್​ ಜೊತೆಗಿನ ರಷ್ಯಾ ಸಂಬಂಧ ಸುಧಾರಿಸಲು ಫ್ರಾನ್ಸ್​, ಜರ್ಮನಿ ಸರ್ಕಸ್

masthmagaa.com:

2014ರಲ್ಲಿ ಉಕ್ರೇನ್​ನಿಂದ ಕ್ರಿಮಿಯಾವನ್ನ ರಷ್ಯಾ ವಶಪಡಿಸಿಕೊಂಡ ನಂತ್ರ ಯುರೋಪಿಯನ್ ಯೂನಿಯನ್ ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನ ಹೇರಿತ್ತು. ಅಲ್ಲಿಂದ ಇಲ್ಲಿವರೆಗೆ ರಷ್ಯಾ ಜೊತೆ ಯುರೋಪಿಯನ್​ ಒಕ್ಕೂಟ ಯಾವುದೇ ಶೃಂಗಸಭೆಯನ್ನ ನಡೆಸಿಲ್ಲ. ಇದೀಗ ಯುರೋಪಿಯನ್ ಯೂನಿಯನ್​ ಜೊತೆಗಿನ ರಷ್ಯಾ ಸಂಬಂಧವನ್ನ ಸುಧಾರಿಸಲು ಫ್ರಾನ್ಸ್ ಮತ್ತು ಜರ್ಮನಿ ಮುಂದಾಗಿವೆ. ಯುರೋಪಿಯನ್ ಯೂನಿಯನ್ ಜೊತೆಗಿನ ಶೃಂಗಸಭೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ಗೆ ಆಹ್ವಾನ ನೀಡುವಂತೆ ಫ್ರಾನ್ಸ್​ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್ ಮತ್ತು ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್​ ಸಲಹೆ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಪುಟಿನ್​ ನಡುವೆ ಜಿನಿವಾದಲ್ಲಿ ಮಾತುಕತೆ ನಡೆದಿತ್ತು. ಮತ್ತೊಂದುಕಡೆ ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್​ ಟೋನಿ ಬ್ಲಿಂಕನ್ ಯುರೋಪ್​ ಪ್ರವಾಸದಲ್ಲಿದ್ದಾರೆ. ನಿನ್ನೆಯಷ್ಟೇ ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್​ ಅವರನ್ನ ಭೇಟಿಯಾಗಿದ್ರು. ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರಾನ್​ಗೂ ಭೇಟಿಯಾಗಲಿದ್ದಾರೆ. ಇದರ ಬೆನ್ನಲ್ಲೇ ಫ್ರಾನ್ಸ್ ಮತ್ತು ಜರ್ಮನಿಯಿಂದ ಈ ಪ್ರಸ್ತಾವನೆ ಬಂದಿದೆ. ಅಂದ್ಹಾಗೆ ಯುರೋಪ್​ ಖಂಡದಲ್ಲೇ ಬರೋ ರಷ್ಯಾ ಮತ್ತು ಉಕ್ರೇನ್​ ಯುರೋಪಿಯನ್​ ಯೂನಿಯನ್​ನ ಸದಸ್ಯ ರಾಷ್ಟ್ರಗಳಲ್ಲ ಅನ್ನೋದು ಗಮನಾರ್ಹ.

-masthmagaa.com

Contact Us for Advertisement

Leave a Reply