ರಾಬರ್ಟ್‌ ವಾದ್ರಾ ಕಂಪನಿಗೆ ಬಾಂಡ್‌ ಖರೀಧಿ ಆದ್ಮೇಲೆ ಕ್ಲೀನ್‌ ಚಿಟ್!

masthmagaa.com:

ಚುನಾವಣಾ ಬಾಂಡ್‌ಗಳ ವಿಚಾರವಾಗಿ ಮತ್ತೊಂದು ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಚುನಾವಣಾ ಬಾಂಡ್‌ ಖರೀಧಿ ನಂತರ DLF ಕಂಪನಿ ಮೇಲಿದ್ದ ಕೇಸನ್ನ ಹರ್ಯಾಣ ಸರ್ಕಾರ ಖುಲಾಸೆಗೊಳಿಸಿತ್ತು ಅನ್ನೋ ವಿಚಾರ ಬಯಲಾಗಿದೆ. ಗುರುಗ್ರಾಮದ ಲ್ಯಾಂಡ್‌ ಡೀಲ್‌ ಒಂದರ ವಿಚಾರವಾಗಿ DLF ಗ್ರೂಪ್‌ನ ರಾಬರ್ಡ್‌ ವಾದ್ರ.. ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಪತಿ ರಾಬರ್ಟ್‌ ವಾದ್ರಾ ಮೇಲೆ ಹರ್ಯಾಣ ಪೊಲೀಸರು ಕೇಸ್‌ ಹಾಕಿದ್ರು. ಆದ್ರೆ 2023ರ ಏಪ್ರಿಲ್‌ನಲ್ಲಿ ಹರ್ಯಾಣ ಬಿಜೆಪಿ ಸರ್ಕಾರ ಕೋರ್ಟ್‌ನಲ್ಲಿ ವಾದ್ರಾ ಡೀಲ್‌ಗಳಲ್ಲಿ ಯಾವುದೇ ಅಕ್ರಮ ನಡೆದಿರೋ ಬಗ್ಗೆ ಎವಿಡೆನ್ಸ್‌ ಇಲ್ಲ ಅಂತೇಳಿ, ಆ ಮೂಲಕ ವಾದ್ರಾಗೆ ರಿಲೀಫ್‌ ಸಿಕ್ಕಿತ್ತು. ಆದ್ರೆ ಈಗ ಎಲೆಕ್ಟೋರಲ್‌ ಬಾಂಡ್‌ಗಳ ಡೇಟಾದಲ್ಲಿ, ಅಕ್ಟೋಬರ್‌ 2019ರಿಂದ 2022ರ ನವೆಂಬರ್‌ವರೆಗೆ DLF ಗ್ರೂಪ್‌ ಬಿಜೆಪಿ 170 ಕೋಟಿ ರೂಪಾಯಿ ದೇಣಿಗೆ ಕೊಟ್ಟಿರೋ ಮಾಹಿತಿ ಸಿಕ್ಕಿದೆ. ಅಲ್ಲದೆ ಬಿಜೆಪಿ ಬಿಟ್ರೆ ಇನ್ಯಾವ ಪಕ್ಷಕ್ಕೂ ಈ ಸಂಸ್ಥೆ ದೇಣಿಗೆ ನೀಡಿಲ್ಲ. ಈ ಎಲ್ಲಾ ಪೇಮೆಂಟ್‌ಗಳ ನಂತರ 2023ರ ಏಪ್ರಿಲ್‌ನಲ್ಲಿ DLFಗೆ ಕ್ಲೀನ್‌ ಚಿಟ್‌ ಸಿಕ್ಕಿದೆ.

-masthmagaa.com

Contact Us for Advertisement

Leave a Reply