ಕೃಷಿ ಕಾನೂನುಗಳಿಗೆ ಕೋರ್ಟ್​ ತಡೆ ನೀಡಿದ ಮೇಲೂ ಧರಣಿ ಯಾಕೆ?

masthmagaa.com:

ಕೇಂದ್ರ ಸರ್ಕಾರದ 3 ಕೃಷಿ ಕಾನೂನುಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದ ಮೇಲೂ ರೈತರು ಯಾಕೆ ಧರಣಿ ನಡೆಸುತ್ತಿದ್ದಾರೆ? ಅಂತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಜೊತೆಗೆ ಹೆಚ್ಚಿನ ರೈತರು ಮತ್ತು ತಜ್ಞರು ಕೃಷಿ ಕಾನೂನುಗಳ ಪರವಾಗಿದ್ದಾರೆ. ಹೀಗಾಗಿ  ಕಾನೂನು ವಾಪಸ್​ ಪಡೆಯೋದನ್ನ ಹೊರತುಪಡಿಸಿ ಬೇರೆ ಏನಾದ್ರೂ ಬೇಡಿಕೆ ಇದ್ದರೆ ಹೇಳಿ. ಸರ್ಕಾರ ಅದರ ಬಗ್ಗೆ ಚರ್ಚಿಸಲು ಸಿದ್ಧವಿದೆ. ಕಾನೂನು ಜಾರಿಗೆ ಸುಪ್ರೀಂಕೋರ್ಟ್​ ತಡೆ ನೀಡಿರೋದ್ರಿಂದ ಏನಾದ್ರೂ ವಿಚಾರ ಇದ್ರೆ ಅದನ್ನ ಕಮಿಟಿ ಮುಂದೆ ಇಡಿ. ಮಂಡಿಗಳು, ವ್ಯಾಪಾರ ನೋಂದಣಿ ಸೇರಿದಂತೆ ಇತರ ವಿಚಾರಗಳ ಬಗ್ಗೆ ರೈತರ ಆತಂಕವನ್ನ ಪರಿಹರಿಸಲು ನಾವು ಒಪ್ಪಿದ್ದೇವೆ ಅಂತ ರೈತ ಸಂಘಟನೆಗಳಿಗೆ ಕಳಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಿದ್ದೇವೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply