ಮಸ್ಕಟ್‌ನಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ!

masthmagaa.com:

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಟೇಕ್‌ ಆಫ್‌ ಆಗೊ ಮೊದ್ಲೇ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾರಿ ದುರಂತ ತಪ್ಪಿದೆ. ಓಮನ್‌ ರಾಜಧಾನಿ ಮಸ್ಕಟ್‌ನ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ವಿಮಾನದಲ್ಲಿದ್ದ ಪ್ರಯಾಣಿಕರನ್ನ ಸ್ಥಳಾಂತರಿಸಲಾಗಿದೆ. ಈ ವಿಮಾನ ಮಸ್ಕಟ್‌ನಿಂದ ಕೇರಳದ ಕೊಚ್ಚಿಗೆ ಹೊರಟಿತ್ತು. ವಿಮಾನದಲ್ಲಿ 4 ಮಕ್ಕಳು ಸೇರಿ ಒಟ್ಟು 145 ಪ್ರಯಾಣಿಕರಿದ್ರು. ಅವರೆಲ್ಲರನ್ನ ವಿಮಾನದಿಂದ ಟರ್ಮಿನಲ್‌ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply