ಮಣಿರತ್ನಂಗೆ ನೋ ಅಂತಾನೇ ಹೇಳದ ಐಶ್ವರ್ಯಾ ರೈ ಬಚ್ಚನ್‌ !

masthmagaa.com:

ನಟಿ ಐಶ್ವರ್ಯಾ ರೈ ಬಚ್ಚನ್‌ ಅವರು ಬಹಳ ವರ್ಷಗಳ ನಂತರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಟಾಪ್‌ ಡೈರೆಕ್ಟರ್ಸ್‌ ಕೇಳಿದ್ರು ಐಶ್ವರ್ಯಾ ಅವರು ಡೇಟ್ಸ್‌ ಕೊಟ್ಟಿರಲಿಲ್ಲ. ಆದರೆ ಮಣಿರತ್ನಂ ಅವರ ಸಿನಿಮಾಕ್ಕೆ ಒಪ್ಪಿಗೆ ಕೊಟ್ಟು ನಟಿಸಿದ್ದಾರೆ.

2016ರಲ್ಲಿ ಐಶ್ವರ್ಯಾ ರೈ ಬಚ್ಚನ್‌ ಅವರು ಬಾಲಿವುಡ್‌ನಲ್ಲಿ ಕೊನೆಯಬಾರಿ ಸಿನಿಮಾ ಮಾಡಿದ್ದರು. 2016ರಲ್ಲಿ ತೆರೆಕಂಡ ಯೇ ದಿಲ್‌ ಹೆ ಮುಷ್‌ಕಿಲ್‌ ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್‌, ರಣಬೀರ್‌ ಕಪೂರ್‌ ಹಾಗೂ ಅನುಷ್ಕಾ ಶರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಐಶ್ವರ್ಯಾ ರೈ ಬಚ್ಚನ್‌ ಅವರು ಬಾಲಿವುಡ್‌ನ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಮಗಳು ಆರಾಧ್ಯ ತಕ್ಕಮಟ್ಟಿಗೆ ದೊಡ್ಡವಳಾಗಿದ್ದರು ಐಶ್ವರ್ಯಾ ರೈ ಬಚ್ಚನ್‌ ಅವರು ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿಸಿರಲಿಲ್ಲ.

ಇದೀಗ ಐಶ್ವರ್ಯಾ ರೈ ಬಚ್ಚನ್‌ ಅವರು ಪೊನ್ನಿಯಿನ್‌ ಸೆಲ್ವನ್‌ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸೌತ್‌ ಸಿನಿಮಾದ ಮಾಂತ್ರಿಕನೆಂದೇ ಕರೆಯಲ್ಪಡುವ ನಿರ್ದೇಶಕ ಮಣಿರತ್ನಂ ಅವರೆ ಕಾರಣ. ಐಶ್ವರ್ಯಾ ರೈ ಬಚ್ಚನ್‌ ಮಣಿರತ್ನಂ ಅವರ ಮಾತಿಗೆ ನೋ ಎನ್ನುವುದಿಲ್ಲ. ಏಕೆಂದರೆ ಐಶ್ವರ್ಯಾ ರೈ ಬಚ್ಚನ್‌ ಹಾಗೂ ಮಣಿರತ್ನಂ ನಡುವೆ ಡೀಪ್‌ ಬಾಂಡಿಂಗ್‌ ಇದೆ.

ಐಶ್ವರ್ಯಾ ರೈ ಬಚ್ಚನ್‌ ಮಿಸ್‌ ವರ್ಲ್ಡ್‌ ಆದ ಬಳಿಕ ಮೊದಲ ಬಾರಿಗೆ 1997 ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಸೌತ್‌ ಸಿನಿಮಾ ಇಂಡಸ್ಟ್ರಿಯ ಮೂಲಕ ಇವರು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಐಶ್ವರ್ಯಾ ರೈ ಬಚ್ಚನ್‌ ಅವರಿಗೆ ಮೊದಲು ಅವಕಾಶ ಕೊಟ್ಟಿದ್ದು ನಿರ್ದೇಶಕ ಮಣಿರತ್ನಂ. ಈ ಕಾಂಬಿನೇಷನ್‌ ಸಿನಿಮಾಗಳು ಇರುವರ್‌, ಗುರು, ರಾವಣ್‌, ಪೊನ್ನಿಯನ್‌ ಸೆಲ್ವನ್‌ ಇವು ಸೂಪರ್‌ಹಿಟ್‌ ಸಿನಿಮಾಗಳಾದವು.

-masthmagaa.com

Contact Us for Advertisement

Leave a Reply