NCP ನಾಯಕ ಅಜಿತ್‌ ಪವಾರ್‌ ಮುಂದಿನ ಮಹಾರಾಷ್ಟ್ರ ಸಿಎಂ ಆಗಲಿದ್ದಾರೆ: ಉದ್ಧವ್‌ ಠಾಕ್ರೆ ಬಣ

masthmagaa.com:

ಮಹಾರಾಷ್ಟ್ರದಲ್ಲಿ ದಿಢೀರ್‌ ಉಂಟಾದ ರಾಜಕೀಯ ಬೆಳವಣಿಗೆ ಇಡೀ ದೇಶದ ಗಮನ ಸೆಳೆದಿದೆ. NCP ನಾಯಕ ಅಜಿತ್‌ ಪವಾರ್‌ ಅವ್ರು ಏಕನಾಥ್‌ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದು, ಡಿಸಿಎಂ ಆಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಶರದ್‌ ಪವಾರ್‌ ಇವತ್ತು NCP ಕಾರ್ಯಕರ್ತರು ಹಾಗೂ ಸಪೋರ್ಟರ್‌ಗಳು ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ವೇಳೆ, ಹಲವು ದಶಕಗಳಿಂದ ಕಟ್ಟಿ ಬೆಳೆಸಿದ ಪಕ್ಷ ಇದೀಗ ಒಡೆದು ಹೋಗಿದೆ. ಆದ್ರೆ ಮತ್ತೆ ಪಕ್ಷವನ್ನ ಕಟ್ಟುತ್ತೇನೆ ಅಂತ ಹೇಳಿದ್ದಾರೆ. ಜೊತೆಗೆ ಮಹಾರಾಷ್ಟ್ರ ಹಾಗೂ ದೇಶದಲ್ಲಿ ಕೋಮು ವಿಭಜನೆ ಮಾಡೋಕೆ ಟ್ರೈ ಮಾಡ್ತಿರೋ ಬಿಜೆಪಿ ತಂತ್ರಕ್ಕೆ ನಮ್ಮಲ್ಲಿನ ಕೆಲವರು ಬಲಿಯಾಗಿದ್ದಾರೆ. ಜನರಲ್ಲಿ ಭಯ ಹುಟ್ಟಿಸೋರ ವಿರುದ್ಧ ನಾವು ಹೋರಾಡ್ಬೇಕು ಅಂತ ಕರೆ ನೀಡಿದ್ದಾರೆ. ಇನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಸಂಸದರಾದ ಸುನಿಲ್ ತಾತ್ಕರೆ, ಪ್ರಫುಲ್ ಪಟೇಲ್‌ ಅವ್ರನ್ನ ಪಕ್ಷದಿಂದ ವಜಾ ಮಾಡಿರೋದಾಗಿ ಘೋಷಿಸಿದ್ದಾರೆ. ಇನ್ನು ಅತ್ತ ಅಜಿತ್‌ ಬಣ ಸುನೀಲ್‌ ತಾತ್ಕರೆಯವನ್ನ NCP ಅಧ್ಯಕ್ಷರಾಗಿ ನೇಮಿಸಿದೆ. ಇನ್ನೊಂದ್‌ ಕಡೆ ಅಜಿತ್‌ ಪವಾರ್‌, ಶೀಘ್ರದಲ್ಲೇ ಸಿಎಂ ಏಕನಾಥ್‌ ಶಿಂಧೆಯನ್ನ ರಿಪ್ಲೇಸ್‌ ಮಾಡಲಿದ್ದಾರೆ. ಅವ್ರು ಕೇವಲ ಡಿಸಿಎಂ ಹುದ್ದೆಗಾಗಿ ಶಿವಸೇನೆಯನ್ನ ಸೇರಿಲ್ಲ.. ಬಿಜೆಪಿ ಈ ಸಲ ಭಾರಿ ದೊಡ್ಡ ಡೀಲ್‌ ಮಾಡಿದೆ ಅಂತ ಉದ್ಧವ್‌ ಬಣ ಟೀಕೆ ಮಾಡಿದೆ.

-masthmagaa.com

Contact Us for Advertisement

Leave a Reply