ವಿದೇಶಕ್ಕೆ ಹಾರಿದ ಬಿಗ್‌ಬಾಸ್ ಖ್ಯಾತಿಯ ಅಕ್ಷತಾ ಕುಕ್ಕಿ !

masthmagaa.com:

‘ಬಿಗ್ ಬಾಸ್’ ಖ್ಯಾತಿಯ ಅಕ್ಷತಾ ಕುಕ್ಕಿ ಮೊನ್ನೆಯಷ್ಟೇ ಅವಿನಾಶ್ ಎಂಬುವವರ ಜೊತೆಗೆ ಹಸೆಮಣೆ ಏರಿದ್ದಾರೆ. ಇದೀಗ ಅಕ್ಷತಾ ಕುಕ್ಕಿ ಗಂಡನೊಂದಿಗೆ ವಿದೇಶದಲ್ಲಿ ನೆಲೆಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಕ್ಷತಾ ಕುಕ್ಕಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. ಅಕ್ಷತಾ ಕುಕ್ಕಿ ವಿದೇಶಕ್ಕೆ ಹೋಗಲು ತಯಾರಿ ಮಾಡಿಕೊಳ್ಳುವ ವಿಡಿಯೋದಲ್ಲಿ, ಬೇಸರದಿಂದ ಮನೆ ಬಿಟ್ಟುಹೋಗುತ್ತಿದ್ದೇನೆ ಅಲ್ಲದೆ ದೇಶವನ್ನೂ ಬಿಟ್ಟುಹೋಗುತ್ತಿದ್ದೇನೆ ಹಾಗೂ ಎಲ್ಲರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ ಎಂದು ಬೇಸರದಲ್ಲಿ ಬಟ್ಟೆಯನ್ನು ಪ್ಯಾಕ್‌ ಮಾಡುತ್ತಿದ್ದಾರೆ. ಹೊಸಮನೆಯಲ್ಲಿ ಹೊಸಜೀವನ ಶುರುಮಾಡುವ ಖುಷಿ ಜೊತೆಗೆ ದುಃಖ ಕೂಡ ಅಕ್ಷತಾ ಕುಕ್ಕಿ ಅವರ ಮನದಲ್ಲಿದೆ.

ಕಳೆದ ತಿಂಗಳು ಮಾರ್ಚ್‌ 27 ರಂದು ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಅವಿನಾಶ್ ಜೊತೆ ಅಕ್ಷತಾ ಕುಕ್ಕಿ ವಿವಾಹ ಅದ್ದೂರಿಯಾಗಿ ನಡೆದಿತ್ತು. ಇನ್ನು ಈ ತಿಂಗಳು ಅಕ್ಷತಾ ಕುಕ್ಕಿ ಪತಿಯೊಂದಿಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಅಕ್ಷತಾ ಕುಕ್ಕಿ ಮಾಡೆಲ್ ಆಗಿ ಮಿಂಚಿ ಬಳಿಕ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಧ್ರುವ ಸರ್ಜಾ ನಟಿಸುತ್ತಿರುವ ‘ಮಾರ್ಟಿನ್’ ಚಿತ್ರದಲ್ಲಿ ಅಕ್ಷತಾ ಕುಕ್ಕಿ ಅಭಿನಯಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ಅಕ್ಷತಾ ಕುಕ್ಕಿ ಸ್ಪರ್ಧಿಸಿದ್ದರು.

-masthmagaa.com

Contact Us for Advertisement

Leave a Reply