ಅಲೆಕ್ಸಿ ಬೆಂಬಲಿಗರಿಗೆ ಜೈಲು ಶಿಕ್ಷೆ: ಅಲೆಕ್ಸಿ ಸಾವಿಗೆ ಸುನಕ್‌ ಸಂತಾಪ!

masthmagaa.com:

ಪುಟಿನ್‌ ಎದುರಾಳಿ ಅಲೆಕ್ಸಿ ನ್ಯಾವಲ್ನಿ ಅವ್ರ ಸಾವು ಖಂಡಿಸಿ ಅವ್ರ ಬೆಂಬಲಿಗರು ರಷ್ಯಾದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ ಇದೀಗ 400ಕ್ಕೂ ಹೆಚ್ಚು ಪ್ರತಿಭಟನೆ ನಡೆಸಿದ್ದ ಅಲೆಕ್ಸಿ ಬೆಂಬಲಿಗರು ರಷ್ಯಾದಲ್ಲಿ ಅರೆಸ್ಟ್‌ ಆಗಿದ್ದಾರೆ. ಜೊತೆಗೆ 154 ಬೆಂಬಲಗರಿಗೆ ಜೈಲು ಶಿಕ್ಷೆ ಕೂಡ ವಿಧಿಸಲಾಗಿದೆ. ಪ್ರತಿಭಟನೆ ವೇಳೆ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಅಲೆಕ್ಸಿ ಬೆಂಬಲಿಗರಿಗೆ 14 ದಿನ ಜೈಲು ಶಿಕ್ಷೆ ನೀಡಲಾಗಿದೆ ಅಂತ ರಷ್ಯಾದ ಲೋಕಲ್‌ ಕೋರ್ಟ್‌ಗಳು ಆದೇಶ ನೀಡಿವೆ. ಅಂದ್ಹಾಗೆ ಅಲೆಕ್ಸಿ ಅವ್ರ ಸಾವಿಗೆ ಪುಟಿನ್‌ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿ ಅಲೆಕ್ಸಿ ಅವ್ರ ಮೃತದೇಹ ಸಹ ಕೊಡ್ತಿಲ್ಲ ಅಂತೇಳಿ ಅಲೆಕ್ಸಿ ಬೆಂಬಲಿಗರು ನಿನ್ನೆಯಿಂದ ರಷ್ಯಾದ ವಿವಿಧೆಡೆ ಪ್ರತಿಭಟನೆ ಶರು ಮಾಡಿದ್ರು. ಆದ್ರೆ ಇದೀಗ ಅಲ್ಲಿನ ಕೋರ್ಟ್‌ಗಳು ಅಲೆಕ್ಸಿ ಬೆಂಬಲಿಗರಿಗೆ ಜೈಲು ಶಿಕ್ಷೆಯ ಆದೇಶ ನೀಡ್ತಿವೆ.


ಮತ್ತೊಂದೆಡೆ ಅಲೆಕ್ಸಿ ಸಾವಿನ ವಿಚಾರವಾಗಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಯುರೋಪಿಯನ್‌ ಒಕ್ಕೂಟದ ಕಮೀಷನರ್‌ ಉರ್ಸುಲಾ ವಾನ್‌ ಡೆರ್‌ ಲೇಯೆನ್‌ ಅವ್ರನ್ನ ಮೀಟ್‌ ಮಾಡಿದ್ದಾರೆ. ಈ ವೇಳೆ ಅಲೆಕ್ಸಿ ಸಾವಿಗೆ ಉಭಯ ನಾಯಕರು ಸಂತಾಪ ಸೂಚಿಸಿದ್ದಾರೆ. ಅಲ್ದೇ ಯುಕ್ರೇನ್‌, ಗಾಜಾ ಯುದ್ಧ, ಕೆಂಪು ಸಮುದ್ರದಲ್ಲಿನ ಹೌತಿಗಳ ದಾಳಿಯನ್ನ ಕೂಡ ಖಂಡಿಸಿದ್ದಾರೆ. ಜೊತೆಗೆ ಗಾಜಾ ಯುದ್ದದ ವಿಚಾರವಾಗಿ ಇಸ್ರೇಲ್‌ ಪ್ರಧಾನಿ ಹಾಗೂ ಜೋರ್ಡಾನ್‌ ರಾಜನೊಂದಿಗೆ ಸಂಭಾಷಣೆ ನಡೆಸಿರೋ ಬಗ್ಗೆ ಸುನಕ್‌, ಲೆಯೆನ್‌ ಅವ್ರಿಗೆ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply