ಮೊದಲ ಬಾರಿಗೆ ಬ್ಯುಸಿನೆಸ್‌ನಲ್ಲಿ ಕೈಜೋಡಿಸಿದ ಅದಾನಿ-ಅಂಬಾನಿ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತದ ಟಾಪ್‌ ಉದ್ಯಮಿಗಳು, ನಂಬರ್‌ 1 ಹಾಗೂ ನಂಬರ್‌ 2.. ಅಂಬಾನಿ ಹಾಗೂ ಅದಾನಿ ಮೊದಲ ಬಾರಿಗೆ ಬ್ಯುಸಿನೆಸ್‌ನಲ್ಲಿ ಕೈಜೋಡಿಸಿದ್ದಾರೆ. ಅದಾನಿ ಸಮೂಹ ಒಡೆತನದ ಮಹಾನ್‌ ಎನರ್ಜೆನ್‌ ಯೂನಿಟ್‌ನಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ 26% ಷೇರುಗಳನ್ನ ಖರೀಧಿಸೋಕೆ ಮುಂದಾಗಿದೆ. ಈ ವಿಚಾರವನ್ನ ಈ ಎರಡೂ ಕಂಪನಿಗಳು ರಿವೀಲ್‌ ಮಾಡಿವೆ. ಈ ಷೇರುಗಳ ಮೌಲ್ಯ ಸುಮಾರು 50 ಕೋಟಿ ರೂಪಾಯಿ ಇದೆ. ಇನ್ನು ಈ ಯೂನಿಟ್‌ನ ಬಳಕೆಗಾಗಿ ಮಧ್ಯಪ್ರದೇಶದಿಂದ 500 ಮೆಗಾವ್ಯಾಟ್‌ ವಿದ್ಯುತ್‌ ಪಡೆಯೋದಾಗಿ ಕಂಪನಿ ಹೇಳಿದೆ. ಸುಮಾರು 20 ವರ್ಷಗಳಿಗೆ ಅನ್ವಯ ಆಗುವಂತೆ ಈ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ.

-masthmagaa.com

Contact Us for Advertisement

Leave a Reply