ಅಮೆರಿಕದಲ್ಲಿ ನಿಲ್ಲುತ್ತಿಲ್ಲ ಕೊರೋನಾ ಅಟ್ಟಹಾಸ.. ಬ್ರೆಜಿಲ್ ಕೂಡ ತತ್ತರ..!

masthmagaa.com:

ಕೊರೋನಾ ಆರ್ಭಟಕ್ಕೆ ನಲುಗಿ ಹೋಗಿರೋ ಅಮೆರಿಕದಲ್ಲಿ ಒಂದೇ ದಿನ ದಾಖಲೆಯ 57,683 ಜನರಿಗೆ ಸೋಂಕು ತಗುಲಿದೆ. ಒಂದೇ ದಿನದಲ್ಲಿ ಇಷ್ಟು ಜನರಿಗೆ ಸೋಂಕು ತಗುಲಿರೋದು ಅಮೆರಿಕದಲ್ಲಿ ಇದೇ ಮೊದಲು. ಈ ಮೂಲಕ ಸತತ ಮೂರನೇ ದಿನ 50 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದಂತಾಗಿದೆ. ಈ ಮೂಲಕ ಜಾಗತಿಕ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರೋ ಅಮೆರಿಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 27.93 ಲಕ್ಷ ದಾಟಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ 728 ಜನ ಮೃತಪಟ್ಟಿದ್ದಾರೆ. ಇದರೊಂದಿಗೆ ಕೊರೋನಾ ಮಹಾಮಾರಿಗೆ ಅಮೆರಿಕದಲ್ಲಿ ಪ್ರಾಣ ಕಳೆದುಕೊಂಡ ಸೋಂಕಿತರ ಸಂಖ್ಯೆ 1.29 ಲಕ್ಷ ದಾಟಿದೆ. ಪ್ರಪಂಚದಲ್ಲಿ ಈ ವೈರಾಣುವಿಗೆ ಸಂಬಂಧಿಸಿದಂತೆ ಅತಿ ಹೆಚ್ಚು ಸಾವು ಸಂಭವಿಸಿರೋದು ಕೂಡ ಅಮೆರಿಕದಲ್ಲೇ.

ಇದನ್ನೂ ಓದಿ: ದೇಶದಲ್ಲಿ ಒಂದೇ ದಿನ 22,771 ಜನರಿಗೆ ಸೋಂಕು.. 442 ಜನ ಬಲಿ..!

ಬ್ರೆಜಿಲ್​ನಲ್ಲಿ ಮತ್ತೆ 42,000 ಜನರಿಗೆ ಸೋಂಕು ತಗುಲಿದ್ದು, 1290 ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಬ್ರೆಜಿಲ್​ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15.39 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 63,000 ದಾಟಿದೆ.

ಟಾಪ್-5 ಕೊರೋನಾ ಪೀಡಿತ ದೇಶಗಳು:

1. ಅಮೆರಿಕ: 27.93 ಲಕ್ಷ ಪ್ರಕರಣ (1.29 ಲಕ್ಷ ಸಾವು)

ಅಮೆರಿಕದಲ್ಲಿ ಸೋಂಕು ವೇಗ ಪಡೆದುಕೊಂಡ ಗ್ರಾಫ್ 

 

2. ಬ್ರೆಜಿಲ್: 15.39 ಲಕ್ಷ ಪ್ರಕರಣ (63,000 ಸಾವು)

ಬ್ರೆಜಿಲ್​ನಲ್ಲಿ ಸೋಂಕು ವೇಗ ಪಡೆದುಕೊಂಡ ಗ್ರಾಫ್

 

3. ರಷ್ಯಾ: 6.66 ಲಕ್ಷ ಪ್ರಕರಣ (9,800 ಸಾವು)

ರಷ್ಯಾದಲ್ಲಿ ಸೋಂಕು ವೇಗ ಪಡೆದುಕೊಂಡ ಗ್ರಾಫ್

 

4. ಭಾರತ: 6.48 ಲಕ್ಷ ಪ್ರಕರಣ (18,655 ಸಾವು)

ಭಾರತದಲ್ಲಿ ಸೋಂಕು ವೇಗ ಪಡೆದುಕೊಂಡ ಗ್ರಾಫ್

 

5. ಪೆರು: 2.95 ಲಕ್ಷ ಪ್ರಕರಣ (10,000 ಸಾವು)

ಪೆರು ದೇಶದಲ್ಲಿ ಸೋಂಕು ವೇಗ ಪಡೆದುಕೊಂಡ ಗ್ರಾಫ್

-masthmagaa.com

Contact Us for Advertisement

Leave a Reply