ಮಹಾರಾಷ್ಟ್ರದಲ್ಲಿ ʻಶಾʼ ಸಭೆ: ರಾಯಬರೇಲಿಯಿಂದ ಪ್ರಿಯಂಕಾ ಗಾಂಧಿ!

masthmagaa.com:

ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಸಂಬಂಧ ಗೃಹ ಸಚಿವ ಅಮಿತ್‌ ಶಾ ಮಂಗಳವಾರ ತಡರಾತ್ರಿ ಮಹತ್ವದ ಮೀಟಿಂಗ್‌ ನಡೆಸಿದ್ದಾರೆ  ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಹಾಗೂ DCMಗಳಾದ ದೇವೆಂದ್ರ ಫಡ್ನವೀಸ್‌ ಹಾಗೂ ಅಜಿತ್‌ ಪವಾರ್ ಜೊತೆ ತಡರಾತ್ರಿ ಮುಂಬೈನಲ್ಲಿ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ಪಿಎಂ ಮೋದಿ ಚಂದ್ರಯಾನ ಲಾಂಚ್‌ ಮಾಡಿದ್ರೆ, ಸೋನಿಯಾ ಗಾಂಧಿ ʻರಾಹುಲ್‌ ಯಾನʼ ಲಾಂಚ್‌ ಮಾಡೊಕೆ ಪ್ರಯತ್ನಿಸಿದ್ದಾರೆ’ ಅಂತ ಗೃಹ ಸಚಿವ ಅಮಿತ್‌ ಶಾ ಟೀಕಿಸಿದ್ದಾರೆ.ಮಹಾರಾಷ್ಟ್ರದ ಜಾಲಗಾಂವ್‌ನಲ್ಲಿ ಯುತ್‌ ರ್‍ಯಾಲಿಯಲ್ಲಿ ಭಾಗವಹಿಸಿ, ಮಾತನಾಡಿದ ಶಾ, ಸೋನಿಯಾ ಅವ್ರ ʻರಾಹುಲ್‌ ಯಾನʼ ಈಗಾಗ್ಲೇ 19 ಬಾರಿ ಫೇಲ್‌ ಆಗಿದೆ. ಆದ್ರೆ 20ಸಲ ಸೋನಿಯಾ ಪ್ರಯತ್ನ ಮಾಡ್ತಿದ್ದಾರೆ. ಸೋನಿಯಾ ತಮ್ಮ ಮಗ ರಾಹುಲ್‌ರನ್ನ ಪಿಎಂ ಮಾಡೋಕೆ ಹೊರಟಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಉದ್ದವ್‌ ಠಾಕ್ರೆ, ತಮಿಳುನಾಡಿನಲ್ಲಿ MK ಸ್ಟಾಲೀನ್‌ ತಮ್ಮ ಮಕ್ಕಳನ್ನ CM ಮಾಡ್ಬೇಕು ಅನ್ಕೊಂಡಿದ್ದಾರೆ ಅಂತ ಶಾ INDI ಮೈತ್ರಿ ಕೂಟದ ವಿರುದ್ದ ಕಿಡಿಕಾರಿದ್ದಾರೆ. ಇನ್ನು ಅತ್ತ ರಾಜ್ಯಸಭೆಗೆ ಆಯ್ಕೆಯಾಗಿರೊ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವ್ರ ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಪ್ರಿಯಂಕಾ ಗಾಂಧಿ ಸ್ಪರ್ಧೆ ಮಾಡ್ಬೇಕು ಅಂತ ಅವ್ರ ಅಭಿಮಾನಿಗಳು ಪೋಸ್ಟರ್‌ ಅಂಟಿಸ್ತಿದ್ದಾರೆ. “ರಾಯ್‌ ಬರೇಲಿ ಹೇಳ್ತಿದೆ ಪ್ರಿಯಂಕಾ ಅವ್ರು ಬಂದಿದ್ದಾರೆ” (‘Rae Bareli pukarti, Priyanka Gandhi ji aaye’) ಅನ್ನೊ ಹೆಸರಿನ ಪೋಸ್ಟರ್‌ಗಳನ್ನ ನಗರದಲ್ಲಿ ಅಂಟಿಸಲಾಗ್ತಿದೆ.

-masthmagaa.com

Contact Us for Advertisement

Leave a Reply