ಸೂರ್ಯ ಗ್ರಹಣದಂದು ಪ್ರಾಣಿಗಳಲ್ಲಿ ವಿಚಿತ್ರ ಬದಲಾವಣೆ!

masthmagaa.com:

ಏಪ್ರಿಲ್‌ 08ರಂದು ಸಂಭವಿಸಿದ್ದ ಸೂರ್ಯ ಗ್ರಹಣ ನಾರ್ತ್‌ ಅಮೆರಿಕಾದ್ಯಂತ ಅತ್ಯಂತ ಸ್ಪಷ್ಟವಾಗಿ ಗೋಚರಿಸಿತ್ತು. ಈ ಅದ್ಭುತ ಬಾಹ್ಯಾಕಾಶ ವಿಸ್ಮಯವನ್ನ ಅಲ್ಲಿನ ಜನರು ಎಕ್ಸ್‌ಪೀರಿಯನ್ಸ್‌ ಮಾಡಿ…ತಮ್ಮ ಕ್ಯಾಮೆರಾದಲ್ಲೂ ಸೆರೆ ಹಿಡಿದಿದ್ದಾರೆ. ಆದ್ರೆ ಆ ದಿನ….ಅಂದ್ರೆ ಸೂರ್ಯ ಗ್ರಹಣದ ಅವಧಿಯಲ್ಲಿ ಎಲ್ಲಾನೂ ನಾರ್ಮಲ್‌ ಆಗಿರ್ಲಿಲ್ಲ.‌ ಕೆಲ ಪ್ರಾಣಿಗಳು ಬಹಳ ವಿಚಿತ್ರವಾಗಿ ವರ್ತಿಸಿದ್ವು ಅಂತ ವಿಜ್ಞಾನಿಗಳು ಹೇಳಿದ್ದಾರೆ. ನಾರ್ತ್‌ ಅಮೆರಿಕದ ಹಲವಾರು ಜೂಗಳನ್ನ ಪರಿಶೀಲಿಸಿದ ವಿಜ್ಞಾನಿಗಳು, ಹೆಚ್ಚಿನ ಪ್ರಾಣಿಗಳು ಮೌನವಾಗಿದ್ವು, ಆದ್ರೆ ಜಿರಾಫೆ, ಗೊರಿಲ್ಲಾ, ಸಿಂಹಗಳು, ಮಕಾವ್‌, ರಾಜಹಂಸದಂತಹ ಪ್ರಾಣಿ ಪಕ್ಷಿಗಳು ವಿಚಿತ್ರವಾಗಿ ನಡೆದುಕೊಳ್ಳೋದನ್ನ ಗಮನಿಸಿದ್ದಾರೆ. ಸೂರ್ಯ ಗ್ರಹಣದ ಸಮಯದಲ್ಲಿ ಈ ಪ್ರಾಣಿಗಳು ಯಾವ್ದೇ ರೀತಿ ಆತಂಕ ಅಥ್ವಾ ಭಯ ಪಟ್ಟಿರೋ ಹಾಗೇ ಕಾಣಿಸಿಲ್ಲ. ಆದ್ರೆ ಬಹಳ ಅಲರ್ಟ್‌ ಆಗಿದ್ವು….ಎಂದಿಗಿಂತ ಸಿಕ್ಕಾಪಟ್ಟೆ ಆ್ಯಕ್ಟಿವ್‌ ಆಗಿದ್ವು. ಸೂರ್ಯ ಗ್ರಹಣ ಮುಗಿದ ಕೂಡಲೇ….ತಟ್ಟಂತ ಈ ಪ್ರಾಣಿಗಳ ವಿಚಿತ್ರ ವರ್ತನೆಗಳು ನಾರ್ಮಲ್‌ ಆದ್ವು ಅಂತ ಹೇಳಲಾಗ್ತಿದೆ. ಕೆಲ ಪ್ರಾಣಿಗಳು ರಾತ್ರಿ ಹೊತ್ತಲ್ಲಿ ತೋರಿಸುವಂತಹ ಬಿಹೇವಿಯರ್‌ಗಳನ್ನ ತೋರಿಸಿದ್ವು. ಇನ್ನು ಕೆಲ ಪ್ರಾಣಿ-ಪಕ್ಷಿಗಳು ಸಿಕ್ಕಾಪಟ್ಟೆ ಆ್ಯಕ್ಟಿವ್‌ ಆಗಿದ್ವು. ಆಚೆಯಿಂದ ಈಚೆ ಓಡಾಡ್ತಿದ್ವು…ಚಡಪಡಿಸ್ತಿದ್ವು. ಕೆಲವು ಮೌನವಾಗಿ ಕೂತ್ಬಿಟ್ಟಿದ್ವು…ಕೆಲ ಪಕ್ಷಿಗಳು ಗುಂಪು ಮಾಡಿ ಒಟ್ಟಿಗೆ ಕೂತಿದ್ವು. ಅಂದ್ಹಾಗೆ ಈ ಹಿಂದೆ 2017 ಮತ್ತು 2020ರ ಗ್ರಹಣ ಸಮಯದಲ್ಲೂ ಪ್ರಾಣಿಗಳು ಈ ರೀತಿ ವಿಚಿತ್ರವಾಗಿ ಆಡಿರೋದು ವರದಿಯಾಗಿತ್ತು.

-masthmagaa.com

Contact Us for Advertisement

Leave a Reply