‘ಅಣ್ಣಾಬಾಂಡ್’ ಗೆ ಹನ್ನೊಂದು ವರ್ಷ!

masthmagaa.com:

ಕರ್ನಾಟಕದ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಅಭಿನಯದ ʻಅಣ್ಣಾಬಾಂಡ್‌ʼ ಸಿನಿಮಾ ಬಿಡುಗಡೆಯಾಗಿ 11 ವರ್ಷ ಕಳೆದಿವೆ. ಇವತ್ತು ಕಾರ್ಮಿಕರ ದಿನಾಚರಣೆ, ಅಣ್ಣಾಬಾಂಡ್‌ ಸಿನಿಮಾ ಕಾರ್ಮಿಕರ ದಿನಚರಣೆಯ ದಿನ ಅಂದ್ರೆ ಮೇ 1, 2012 ಮಂಗಳವಾರ ರಿಲೀಸ್‌ ಆಗಿತ್ತು. ಅಣ್ಣಾಬಾಂಡ್‌ ಅಪ್ಪು ಅವರ 18 ನೇ ಸಿನಿಮಾ ಆಗಿತ್ತು. ರಿಲೀಸ್‌ಗೂ ಮುಂಚೆ ಹೈ ಎಕ್ಸ್‌ಪೆಕ್ಟೇಶನ್‌ ಕ್ರಿಯೆಟ್‌ ಮಾಡಿದ ಅಪ್ಪು ಅವರ ಸಿನಿಮಾಗಳಲ್ಲಿ ʻಅಣ್ಣಾಬಾಂಡ್‌ʼ ಸಿನಿಮಾ ಕೂಡ ಒಂದು. ಯಾಕೆಂದರೆ ಅಣ್ಣಾಬಾಂಡ್‌ ಟೀಸರ್‌ ರಿಲೀಸ್‌ ಆದಾಗ ಅದರಲ್ಲಿದ್ದ ಅಪ್ಪು ಅವರ ಆಕ್ಶನ್‌, ಸ್ಟೈಲ್‌, ಸಿಕ್ಸ್‌ಪ್ಯಾಕ್ಸ್‌ ಲುಕ್‌, ಡ್ಯಾನ್ಸ್‌ ಅಭಿಮಾನಿಗಳಿಗೆ ಸಖತ್‌ ಇಷ್ಟವಾಗಿತ್ತು.

ಇನ್ನು ಅಣ್ಣಾಬಾಂಡ್‌ ಸಿನಿಮಾವನ್ನು ದುನಿಯಾ ಸೂರಿ ನಿರ್ದೇಶನ ಮಾಡಿದ್ರು. ಪುನೀತ್‌ ರಾಜಕುಮಾರ್‌ ಹಾಗೂ ಸೂರಿ ಕಾಂಬಿನೇಶನ್‌ ಎರಡನೇ ಚಿತ್ರ ಅಣ್ಣಾಬಾಂಡ್‌ ಆಗಿತ್ತು. ಅಪ್ಪು ಅಭಿನಯಿಸಿರುವ ಮೂರು ಸಿನಿಮಾಗಳನ್ನು ದುನಿಯಾ ಸೂರಿ ನಿರ್ದೇಶನ ಮಾಡಿದ್ದಾರೆ. ʻಜಾಕಿʼ, ʻಅಣ್ಣಾಬಾಂಡ್‌ʼ, ʻದೊಡ್ಡಮನೆ ಹುಡುಗ. ಅಪ್ಪು ಮತ್ತು ಸೂರಿ ಕಾಂಬಿನೇಶನ್‌ನ ಮೊದಲನೇ ಸಿನಿಮಾ ಜಾಕಿ ಬ್ಲಾಕ್‌ಬಾಸ್ಟರ್‌ ಹಿಟ್‌ ಆಗಿತ್ತು. ಜಾಕಿ ಸಿನಿಮಾದ 100 ಡೇಸ್‌ ಇವೆಂಟ್‌ನಲ್ಲಿ ಸೂರಿಯವರೇ ʻಅಣ್ಣಾಬಾಂಡ್‌ʼ ಸಿನಿಮಾ ಮಾಡುತ್ತೇವೆ ಅಂತ ಅನೌನ್ಸ್‌ ಮಾಡಿದ್ದರು. ಬಳಿಕ ಪರಮಾತ್ಮ ಸಿನಿಮಾ ಬಿಡುಗಡೆ ಆದ ಮುಂದಿನ ದಿನವೇ ಅಣ್ಣಾಬಾಂಡ್‌ ಸಿನಿಮಾದ ಮುಹೂರ್ತ ನೆರವೇರಿತ್ತು. ಈ ಸಿನಿಮಾಕ್ಕೆ ಕ್ಲಾಪ್‌ ಮಾಡಿದ್ದು ಅಪ್ಪು ಅವರ ಲಕ್ಕಿ ಹ್ಯಾಂಡ್‌ ವಿ. ರವಿಚಂದ್ರನ್‌. ಪುನೀತ್‌ ಅವರ ”ಅಪ್ಪು’, ‘ಅಭಿ’, ಹಿಟ್ ಚಿತ್ರಗಳಿಗೆ ಕ್ಲಾಪ್ ಮಾಡಿದ್ದು ರವಿಚಂದ್ರನ್ ಅವರೇ.

ಇನ್ನು ಈ ಸಿನಿಮಾದ ಹೈಲೆಟ್ಸ್‌ ಬಗ್ಗೆ ನೋಡುತ್ತಾ ಹೋಗೋಣಾ..

ಆಕ್ಶನ್‌ ಹಾಗೂ ರಿವೆಂಜ್‌ ಎಲಿಮೆಂಟ್ಸ್‌ ಹೊಂದಿದ್ದ ಈ ಸಿನಿಮಾದಲ್ಲಿ ಅಪ್ಪು ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಇನ್ನು ಹೆಚ್ಚು ಅಟ್ರಾಕ್ಟ್‌ ಮಾಡಿದ್ದು ಅಪ್ಪು ಅವರು ಯ್ಯೂಸ್‌ ಮಾಡಿದ್ದಂತಹ ಗೋಸ್ಟ್‌ ರೈಡರ್‌ ಬೈಕ್‌. ಸಿನಿಮಾ ರಿಲೀಸ್‌ ಆದಮೇಲೆ ಈ ಬೈಕನ್ನು ತುಂಬಾ ಕಡೆ ಪ್ರದರ್ಶನ ಮಾಡಲಾಯಿತು. ಜೊತೆಗೆ ಅಪ್ಪು ಅವರ ಕಾಸ್ಟುಮ್‌, ಅವರ ಫಿಟ್‌ನೆಸ್‌, ಸಿನಿಮಾದ ಲೋಕೆಶನ್‌ ಹಾಗೂ BGM ತುಂಬಾ ಗಮನ ಸೆಳೆದಿತ್ತು. ಯಾಕೆಂದರೆ ಅಪ್ಪು ಅವರ ಸಿನಿಮಾ ಅಂದ್ರೆ ಜನ ಮೊದಲು ಎಕ್ಸ್‌ಪೆಕ್ಟ್‌ ಮಾಡೋದು ಅವರ ಡ್ಯಾನ್ಸ್‌ ಹಾಗೂ ಫೈಟ್‌. ಡ್ಯಾನ್ಸ್‌ ಹಾಗೂ ಫೈಟ್ಸ್‌ ಈ ಎರಡಕ್ಕೂ ಏನು ಕೊರತೆ ಆಗದಂತೆ ಸಿನಿಮಾ ಮಾಡಲಾಗಿತ್ತು. ಸಿನಿಮಾದ ಇಂಟ್ರ ಡಕ್ಶನ್‌ ಫೈಟ್‌ ಹಾಗೂ ಕ್ಲೈಮಾಕ್ಸ್‌ ಫೈಟ್‌ ಸಖತಾಗಿ ಟಾಪ್‌ ಕ್ಲಾಸ್‌ಲ್ಲಿ ಆಗಿತ್ತು. ಸಿನಿಮಾದ ಕ್ಲೈಮಾಕ್ಸ್‌ ಫೈಟ್‌ ಅಂತು ಅಪ್ಪು ಅವರ ಡೆಡಿಕೆಶನ್‌ ಲೆವಲ್‌ ಎಷ್ಟು ಅನ್ನೋದನ್ನ ತೋರಿಸಿಕೊಟ್ಟಿತ್ತು. ಅಪ್ಪು ಅವರು ಮೊದಲನೇ ಬಾರಿಗೆ ಸಿಕ್ಸ್‌ಪ್ಯಾಕ್‌ ಮಾಡಿ ಭರ್ಜರಿ ಫೈಟ್‌ ಮಾಡಿದ್ರು. ಇನ್ನು ಈ ಸಿನಿಮಾದ ಫೈಟ್‌ ಕೋರಿಯೊಗ್ರಾಫರ್‌ ಬಗ್ಗೆ ಹೇಳಲೇಬೇಕು. ಫೈಟ್‌ ಕೋರಿಯೋಗ್ರಾಪ್‌ ಮಾಡಿದ್ದು ರವಿವರ್ಮ ಹಾಗೂ ಡಿಫ್‌ರೆಂಟ್‌ ಡ್ಯಾನಿ. ಆಕ್ಶನ್‌ ಥ್ರಿಲ್ಲರ್‌ ಸಿನಿಮಾ ಆಗಿದ್ದರಿಂದ ಎಲ್ಲಾ ಫೈಟ್ಸ್‌ ಟಾಪ್‌ ಲೆವಲ್‌ನಲ್ಲಿತ್ತು. ಇನ್ನು ಸಿನಿಮಾದಲ್ಲಿ ಹರಿಕೃಷ್ಣ ಅವರ BGM ಕೂಡ ಮೋಡಿ ಮಾಡಿತ್ತು.

ಇನ್ನು ಸಿನಿಮಾದಲ್ಲಿ ಪುನೀತ್ – ರಂಗಾಯಣ ರಘು ಕಾಂಬಿನೇಶನ್‌ ವರ್ಕ್‌ ಔಟ್ ಆಗಿತ್ತು. ರಂಗಾಯಣ ರಘು ಕಾಮಿಡಿ ಜೊತೆಗೆ ನೀನಾಸಂ ಸತೀಶ್‌ ಕ್ಯಾಮಿಯೋ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಅದು ಬಿಟ್ರೆ ಕಾಣದಂತೆ ಮಾಯವಾದನು ಹಾಡಿಗೆ ಪುನೀತ್, ಪ್ರಿಯಾಮಣಿ, ನಿಧಿ ಸುಬ್ಬಯ್ಯ ಡ್ಯಾನ್ಸ್ ಮತ್ತು ಕಾಸ್ಟ್ಯೂಮ್ಸ್ ಸಖತ್‌ ಆಗಿತ್ತು. ಈ ಸಿನಿಮಾದಲ್ಲಿ ಅಪ್ಪು ಅವರು ಎರಡು ಹಾಡುಗಳನ್ನು ಹಾಡಿದ್ದರು. ತುಂಬಾ ನೋಡಬೇಡಿ ಲವು ಆಯ್ತದೆ ಮತ್ತು ಕಾಣ ದಂತೆ ಮಾಯವಾದನು. ಈ ಎರಡು ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು.

ಇನ್ನು ಸ್ನೇಹಿತರೇ.. ಅಣ್ಣಾಬಾಂಡ್‌ ಪುನೀತ್‌ ರಾಜ್‌ಕುಮಾರ್‌ ಹಾಗೂ ಪ್ರಿಯಾಮಣಿ ಕಾಂಬಿನೇಷನ್‌ನ ಎರಡನೇ ಸಿನಿಮಾ ಆಗಿತ್ತು. ಇದಕ್ಕೂ ಮುಂಚೆ ʻರಾಮ್‌ʼ ಸಿನಿಮಾದಲ್ಲಿ ಪುನೀತ್‌ ಹಾಗೂ ಪ್ರಿಯಾಮಣಿ ಜೋಡಿಯಾಗಿದ್ದರು. ಪುನೀತ್‌ ರಾಜ್‌ಕುಮಾರ್‌ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಕಾಂಬಿನೇಷನ್‌ನ 6ನೇ ಸಿನಿಮಾ ಕೂಡ ಅಣ್ಣಾಬಾಂಡ್‌ ಸಿನಿಮಾನೇ.

ಈ ಸಿನಿಮಾದ ಶೂಟಿಂಗ್‌ ಬೆಂಗಳೂರು, ಕನಕಪುರ, ಕೂರ್ಗ್‌ ಹಾಗೂ ಎರಡು ಹಾಡುಗಳನ್ನು ಸ್ಪೇನ್‌ನಲ್ಲಿ ಶೂಟ್‌ ಮಾಡಲಾಗಿತ್ತು.

ಇನ್ನು ಸ್ನೇಹಿತರೇ.. ಅಣ್ಣಾಬಾಂಡ್‌ ಸಿನಿಮಾ ರಿಲೀಸ್‌ಗೂ ಮೊದಲು ಸೂರಿ ಮಾತನಾಡಿ ʻನಿಮ್ಮ ಜೀವನದ ಅಮೂಲ್ಯ ಎರಡು ಗಂಟೆಯನ್ನು ನನ್ನ ಚಿತ್ರಕ್ಕೆ ಮೀಸಲಿಡುತ್ತೀರಿ. ನಿಮ್ಮ ಎರಡು ಗಂಟೆಗೆ ನಾನು ನ್ಯಾಯ ಒದಗಿಸುತ್ತೇನೆ ಎಂದಿದ್ದರು. ಸೂರಿ ಅವರ ಮಾತಿನಂತೆ ನಡೆದುಕೊಂಡಿದ್ದರು. ಸಿನಿಮಾ 50 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು.

ಸಾಮಾನ್ಯವಾಗಿ ಎಲ್ಲಾ ಸಿನಿಮಾ ಶುಕ್ರವಾರ ರಿಲೀಸ್‌ ಆಗುತ್ತವೆ. ಡಾ. ರಾಜ್‌ಕುಮಾರ್‌ ಅವರ ಸಿನಿಮಾ ವಿಶೇಷವಾಗಿ ಗುರುವಾರ ರಿಲೀಸ್‌ ಆಗುತ್ತಿದ್ದವು. ಅದ್ರೆ ಅಣ್ಣಾಬಾಂಡ್‌ ಸಿನಿಮಾ ಕಾರ್ಮಿಕರ ದಿನದಂದು ವಿಶೇಷವಾಗಿ ಮಂಗಳವಾರ ರಿಲೀಸ್‌ ಆಗಿತ್ತು. ಇವತ್ತಿಗೆ ಸಿನಿಮಾ ಬಿಡುಗಡೆಯಾಗಿ 11 ವರ್ಷ ಅಗಿದೆ. ಈ ವಿಚಾರವನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಪ್ಪು ಅವರನ್ನು ನೆನಸಿಕೊಂಡಿದ್ದಾರೆ. ಸೋ ಸ್ನೇಹಿತರೇ ಅಣ್ಣಾಬಾಂಡ್‌ ಸಿನಿಮಾದಲ್ಲಿ ನಿಮಗೆ ಯಾವ ಯಾವ ಸೀನ್‌ ಇಷ್ಟಾ ? ಅಣ್ಣಾಬಾಂಡ್‌ ಸಿನಿಮಾ ಅಂದ್ರೆ ಮೊದಲು ನಿಮ್ಮ ತಲೆಗೆ ಏನು ಬರುತ್ತೆ ? ಈ ಎಲ್ಲವನ್ನು ಕಮೆಂಟ್‌ ಮಾಡಿ ತಿಳಿಸಿ.

-masthmagaa.com

Contact Us for Advertisement

Leave a Reply