ಹೀರೋಯಿನ್‌ ಮಟೀರಿಯಲ್‌ ಅಲ್ಲ ಎಂದ ನೆಟ್ಟಿಗನಿಗೆ ತಿರುಗೇಟು ಕೊಟ್ಟ ಅನುಪಮಾ ಪರಮೇಶ್ವರನ್‌ !

masthmagaa.com:

ಹೀರೋಯಿನ್‌ ಮಟೀರಿಯಲ್‌ ಅಲ್ಲ ಎಂದವನಿಗೆ ನಟಿ ಅನುಪಮಾ ಪರಮೇಶ್ವರನ್‌ ಖಡಕ್‌ ಆಗಿ ತಿರುಗೇಟು ಕೊಟ್ಟಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ 1 ಕೋಟಿಗೂ ಅಧಿಕ ಫಾಲೋವರ್ಸ್‌ಗಳನ್ನ ಹೊಂದಿರುವ ಅನುಪಮ ಪರಮೇಶ್ವರನ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ನಟ ಸಾರ್ವಭೌಮ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಂತ ನಟಿ. ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಒಳ್ಳೆಯ ಜನಪ್ರಿಯತೆಯನ್ನ ಪಡೆದಿದ್ದಾರೆ. ಇತ್ತೀಚೆಗೆ ನೆಟ್ಟಿಗನೊಬ್ಬ ‘‘ಇವರು ಯಾವ ದೊಡ್ಡ ಸಿನಿಮಾ ಕೂಡ ಮಾಡಿಲ್ಲ. ನನ್ನ ಪಾಲಿಗೆ ಇವರು ಹೀರೋಯಿನ್​ ಮಟೀರಿಯಲ್​ ಅಲ್ಲ’’ ಎಂದು ಟ್ರೋಲ್​ ಮಾಡಿದ್ದಾರೆ. ಅದಕ್ಕೆ ಅನುಪಮಾ ಪರಮೇಶ್ವರನ್​ ಅವರು ಸರಿಯಾಗಿ ತಿರುಗೇಟು ನೀಡಿದ್ದಾರೆ.

‘ಹೌದು ಅಣ್ಣಾ.. ನಾನು ಹೀರೋಯಿನ್​ ಟೈಪ್​ ಅಲ್ಲ. ನಾನು ನಟಿ ಟೈಪ್​’ ಎಂದು ಅನುಪಮಾ ಪರಮೇಶ್ವರನ್​ ಹೇಳಿದ್ದಾರೆ. ಅವರ ಈ ಹೇಳಿಕೆ ಸರಿಯಾಗಿಯೇ ಇದೆ ಯಾಕಂದ್ರೆ ಯಾರು ಬೇಕಾದರೂ ಹೀರೋಯಿನ್​ ಎನಿಸಿಕೊಳ್ಳಬಹುದು. ಆದರೆ ನಟಿ ಎನಿಸಿಕೊಳ್ಳಲು ಅಭಿನಯ ಬರಬೇಕು. ಹಾಗಾಗಿ ತಮ್ಮನ್ನು ಹೀರೋಯಿನ್​ ಎಂಬುದಕ್ಕಿಂತಲೂ ನಟಿ ಅಂತ ಕರೆದರೆ ಹೆಚ್ಚು ಸೂಕ್ತ ಎಂದು ಅನುಪಮಾ ಪರಮೇಶ್ವರನ್​ ಅವರು ಈ ಮೂಲಕ ಸಂದೇಶ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply