ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನನ

masthmagaa.com:

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ಗುಡ್​ ನ್ಯೂಸ್ ಅನ್ನ ಸ್ವತಃ ವಿರಾಟ್​ ಕೊಹ್ಲಿಯೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ‘ಇಂದು ಮಧ್ಯಾಹ್ನ ನಮಗೆ ಹೆಣ್ಣು ಮಗು ಜನನವಾಗಿದೆ ಅಂತ ಹೇಳಲು ತುಂಬಾ ಖುಷಿಯಾಗ್ತಿದೆ. ನಿಮ್ಮೆಲ್ಲಾ ಪ್ರೀತಿ, ಪ್ರಾರ್ಥನೆ ಮತ್ತು ವಿಶ್​​ಗಳಿಗೆ ಧನ್ಯವಾದ. ಅನುಷ್ಕಾ ಶರ್ಮಾ ಮತ್ತು ಮಗು.. ಇಬ್ಬರೂ ಆರಾಮಾಗಿದ್ದಾರೆ. ಜೀವನದ ಈ ಹೊಸ ಅಧ್ಯಾಯವನ್ನ ಅನುಭವಿಸಲು ಅವಕಾಶ ಸಿಕ್ಕಿರೋದು ನಮ್ಮ ಸೌಭಾಗ್ಯ. ಈ ಸಮಯದಲ್ಲಿ ನೀವು ನಮಗೆ ಸ್ವಲ್ಪ ಪ್ರೈವಸಿ ಕೊಡ್ತೀರಿ ಅಂತ ಭಾವಿಸಿದ್ದೇವೆ. ಲವ್ ವಿರಾಟ್’ ಅಂತ ಬರೆದುಕೊಂಡಿದ್ದಾರೆ. ಅಂದ್ಹಾಗೆ ಡಿಸೆಂಬರ್ 11, 2017ರಲ್ಲಿ ಕೊಹ್ಲಿ ಮತ್ತು ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದರು. ಇದೀಗ ಅವರಿಗೆ ಹೆಣ್ಣು ಮಗು ಜನಿಸಿದೆ. ಟೀಂ ಇಂಡಿಯಾದ ಮಾಜಿ ನಾಯಕ ಧೋನಿ-ಸಾಕ್ಷಿ ದಂಪತಿಗೂ ಹೆಣ್ಣು ಮಗುವೇ ಹುಟ್ಟಿದ್ದು ಅನ್ನೋದು ವಿಶೇಷ.

-masthmagaa.com

Contact Us for Advertisement

Leave a Reply