SSC ಪರೀಕ್ಷೆ ಅಕ್ರಮ: ಆರೋಪಿ ಪಟ್ಟಿಯಲ್ಲಿ 10 ಜನ್ರ ಹೆಸರು!

masthmagaa.com:

2018ರಲ್ಲಿ SSC( Staff Selection Commission) ನಡೆಸಿದ ಪರೀಕ್ಷೆಯಲ್ಲಿ ಅನೇಕ ಅಕ್ರಮಗಳು ನಡೆದಿವೆ ಅಂತ CBI ಹೇಳಿದೆ. ಈ ಸಂಬಂಧ ತನಿಖೆ ನಡೆಸ್ತಾ ಇರೋ ಅದು, ಸರ್ಕಾರಿ ನೌಕರರ ಜೊತೆ ಈ ಪಿತೂರಿಯಲ್ಲಿ ನೆರವು ನೀಡಿದ ಆರೋಪದ ಮೇಲೆ ಸೈಫಿ ಟೆಕ್ನಾಲಜಿ ಲಿಮಿಟೆಡ್‌ ಮಾಲಿಕ ಸೇರಿದಂತೆ 10 ಜನರನ್ನ ಹೆಸರಿಸಿದೆ. ಅಂದ್ಹಾಗೆ 2018ರ ಫೆಬ್ರವರಿ 17 ರಿಂದ 22 ರವರೆಗೆ Combined Graduate Level ಸಾಮಾನ್ಯವಾಗಿ CGL ಅಂತ ಕರೆಯೋ ಪರೀಕ್ಷೆಯನ್ನ ನಡೆಸಲಾಗಿತ್ತು. ಆಗ ಫೆಬ್ರವರಿ 21 ರಂದು ಪರೀಕ್ಷೆ ಆರಂಭವಾಗೋ ಮೊದ್ಲೇ ಫೇಸ್‌ಬುಕ್‌ನಲ್ಲಿ ಉತ್ತರಗಳು ಪ್ರಕಟವಾಗಿದ್ವು ಅಂತ ಮೂಲಗಳು ಹೇಳಿವೆ. ಇನ್ನು ಆನ್‌ಲೈನ್‌ ಪರೀಕ್ಷೆ ನಡೆಸೋ ಜವಾಬ್ದಾರಿಯನ್ನ ಸೈಫಿ ಟೆಕ್ನಾಲಜಿಗೆ ವಹಿಸಲಾಗಿತ್ತು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply