ಹೆಂಡತಿಗೆ ತಮಿಳಿನಲ್ಲೇ ಮಾತನಾಡಲು ಹೇಳಿದ ಎ.ಆರ್‌ ರೆಹಮಾನ್‌ : ವಿಡಿಯೋ ವೈರಲ್‌

masthmagaa.com:

ಸಂಗೀತ ಮಾಂತ್ರಿಕ ಅಂತಾನೇ ಫೇಮಸ್‌ ಆಗಿರುವ ಎ.ಆರ್ ರೆಹಮಾನ್ ಇತ್ತೀಚೆಗೆ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಹಿಂದಿಯ ಬದಲು ತಮಿಳಿನಲ್ಲಿ ಮಾತನಾಡುವಂತೆ ಪತ್ನಿ ಸೈರಾ ಬಾನುಗೆ ಹೇಳಿದ್ದಾರೆ. ಈ ಒಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಾ ಇದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಆರ್ ರೆಹಮಾನ್, “ನಾನು ನನ್ನ ಸಂದರ್ಶನಗಳನ್ನು ಪದೇ ಪದೇ ನೋಡೊದಿಲ್ಲ. ಪದೇ ಪದೇ ನೋಡೊದು ನನಗೆ ಇಷ್ಟ ಆಗಲ್ಲ. ಆದ್ರೆ ನನ್ನ ಪತ್ನಿ ನೋಡ್ತಾಳೆ. ನನ್ನ ಹಾಡನ್ನ ಅವಳೂ ಸಹ ಹಾಡ್ತಾ ಇರ್ತಾಳೆ. ಯಾಕಂದ್ರೆ ಅವಳಿಗೆ ನನ್ನ ಧ್ವನಿ ಇಷ್ಟ ಆಗತ್ತಂತೆ” ಅಂತ ಹೇಳಿದ್ದಾರೆ.

ನಂತರ ಸೈರಾ ಬಾನು ಮಾತನಾಡಲು ಪ್ರಾರಂಭಸಿದಾಗ, “ಹಿಂದಿಯಲ್ಲಿ ಬೇಡ ತಮಿಳಿನಲ್ಲಿ ಮಾತಾಡು” ಅಂತ ರೆಹಮಾನ್‌ ಹೇಳಿದ್ರು. ರೆಹಮಾನ್‌ ಮಾತಿಗೆ ನಗಾಡುತ್ತಾ ಮಾತು ಶುರು ಮಾಡಿದ ಸೈರಾ ಬಾನು “ನನ್ನನ್ನ ಕ್ಷಮಿಸಿ. ನಿರರ್ಗಳವಾಗಿ ತಮಿಳು ಮಾತಾಡೋಕೆ ನನಗೆ ಬರೋದಿಲ್ಲ. ನಾನು ಇವತ್ತು ತುಂಬಾ ಅಂದ್ರೆ ತುಂಬಾ ಖುಷಿಯಾಗಿದ್ದೀನಿ. ರೆಹಮಾನ್‌ ಅವರಿಗೆ ಪ್ರಶಸ್ತಿ ಬಂದಿದ್ದಕ್ಕೆ ನನಗೆ ತುಂಬಾ ಖುಷಿ ಇದೆ. ನನಗೆ ರೆಹಮಾನ್‌ ಅವರ ಧ್ವನಿ ಅಂದ್ರೆ ಸಖತ್‌ ಇಷ್ಟ. ಅವರ ಧ್ವನಿಯನ್ನ ಜಾಸ್ತಿ ಪ್ರೀತಿ ಮಾಡ್ತೀನಿ” ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply