ಎ ಆರ್ ರೆಹಮಾನ್ ಸಂಗೀತ ಕಾರ್ಯಕ್ರಮ ಅರ್ಧಕ್ಕೇ ನಿಲ್ಲಿಸಿದ ಪೊಲೀಸರು!

masthmagaa.com:

ಪುಣೆಯ ರಾಜಾ ಬಹದ್ದೂರ್ ಮಿಲ್ ಎಂಬಲ್ಲಿ ಎಆರ್‌ ರೆಹಮಾನ್‌ ಅವರ ಸಂಗೀತ ಕಾರ್ಯಕ್ರಮ ನಡೀತಾ ಇದ್ದಂತ ಸಂದರ್ಭದಲ್ಲಿ ಸ್ಟೇಜ್‌ ಮೇಲೆ ಪೋಲಿಸರು ಬಂದು ಕಾರ್ಯಕ್ರಮವನ್ನ ಸ್ಟಾಪ್‌ ಮಾಡುವಂತೆ ಹೇಳಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಇದೀಗ ಪೋಲಿಸರು ಯಾಕೆ ಸ್ಟಾಪ್‌ ಮಾಡೋಕೆ ಹೇಳಿದ್ರು ಅನ್ನೋದಕ್ಕೆ ಪುಣೆ ಪೋಲಿಸರು ಸ್ಪಷ್ಟನೆ ಕೊಟ್ಟಿದ್ದಾರೆ.

ಪುಣೆಯಲ್ಲಿ ಬಾಲಿವುಡ್‌ ಸಂಗೀತ ಮಾಂತ್ರಿಕ ಎಆರ್‌ ರೆಹಮಾನ್‌ ಅವರು ಸಂಗೀತ ಕಾರ್ಯಕ್ರಮದಲ್ಲಿ, ತಮ್ಮ ಹಿಟ್‌ ಸಾಂಗ್‌ ಚೈಯ್ಯಾ ಚೈಯ್ಯಾ ಸಾಂಗ್‌ ಅನ್ನ ಹಾಡ್ತಾ ಇದ್ದಂತ ಸಂದರ್ಭದಲ್ಲಿ ಪೋಲಿಸರು ಸೀದಾ ಸ್ಟೇಜ್‌ ಮೇಲೆ ಬಂದು ಸ್ಟಾಪ್‌ ಮಾಡುವಂತೆ ಹೇಳಿದ್ರು, ಅದರಲ್ಲೂ ಅಭಿಮಾನಿಗಳು ಒನ್ಸ್‌ಮೋರ್‌, ಒನ್ಸ್‌ಮೋರ್‌ ಅಂತ ಕೂಗ್ತಾ ಇದ್ರೂ ಕೂಡ ಪ್ರೋಗ್ರಾಮ್‌ ಅಲ್ಲೇ ಸ್ಟಾಪ್‌ ಮಾಡಲಾಗಿತ್ತು. ಈ ವಿಡಿಯೋವನ್ನ ಎಆರ್‌ ರೆಹಮಾನ್‌ ಅವರ ಅಭಿಮಾನಿಯೊಬ್ಬ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದ. ಈ ವಿಡಿಯೋ ವೈರಲ್‌ ಆಗ್ತಾ ಇದ್ದಂತೆ ಪುಣೆ ಪೋಲಿಸ್‌ ಅಧಿಕಾರಿ ಡಿಸಿಪಿ ಸ್ಮಾರ್ತನ ಪಾಟೀಲ್ ಇದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.

“ರೆಹಮಾನ್‌ ತಮ್ಮ ಕೊನೆಯ ಹಾಡನ್ನ ಹಾಡ್ತಾ ಇದ್ರು. ಆಗ ಆಲ್‌ರೆಡಿ 10 ಗಂಟೆ ಆಗಿತ್ತು, ಟೈಮ್‌ ಆದ ವಿಷಯ ರೆಹಮಾನ್‌ ಅವರಿಗೆ ಗೊತ್ತಿರಲಿಲ್ಲ. ಲೈವ್ ಕನ್ಸರ್ಟ್‌ನ ಟೈಮ್‌ ರಾತ್ರಿ 8 ರಿಂದ ರಾತ್ರಿ 10 ರವರೆಗೆ ಇತ್ತು. SC ಮಾರ್ಗಸೂಚಿಗಳ ಪ್ರಕಾರ 10 ಗಂಟೆಯ ನಂತರ ಹಾಡುವಂತಿರಲಿಲ್ಲ, ಹಾಗಾಗಿ ಸ್ಥಳದಲ್ಲಿದ್ದ ನಮ್ಮ ಅಧಿಕಾರಿಯೊಬ್ರು ಹೋಗಿ ಟೈಮ್‌ ಆದ ಬಗ್ಗೆ ರೆಹಮಾನ್‌ ಅವರಿಗೆ ಹೇಳಿದ್ದಾರೆ ಅಷ್ಟೇ” ಅಂತ ಹೇಳಿದ್ದಾರೆ.

ಪುಣೆಯ ಸಂಗೀತ ಕಾರ್ಯಕ್ರಮ ಸ್ಟಾಪ್‌ ಆದ ಬೆನ್ನಲ್ಲೇ ರೆಹಮಾನ್‌ ಅಭಿಮಾನಿಗಳಿಗೆ “ಪುಣೆಯಲ್ಲಿ ನೀವು ನನಗೆ ನೀಡಿದ್ದ ಪ್ರೀತಿಗೆ ನಿಮಗೆಲ್ಲ ಧನ್ಯವಾದಗಳು. ನಿಮ್ಮೆಲ್ಲರೊಂದಿಗೆ ಮತ್ತೆ ಹಾಡಲು ನಾನು ಬರ್ತೀನಿ” ಅಂತ ಟ್ವೀಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply