ಒಂದೇ ಸಿನಿಮಾದಲ್ಲಿ ಇಬ್ಬರು ಸ್ಟಾರ್‌ ನಟರ ಆರ್ಭಟ!

masthmagaa.com:

ಬಾಲಿವುಡ್ ನಟ ಹೃತಿಕ್ ರೋಷನ್ ಅವರು ‘ವಾರ್ 2’ ಸಿನಿಮಾದಲ್ಲಿ ನಟಿಸುವುದು ಖಚಿತವಾಗಿದೆ. ಈ ಸಿನಿಮಾದಲ್ಲಿ ಹೃತಿಕ್‌ ರೋಷನ್‌ ಅವರ ಜೊತೆ ಜೂನಿಯರ್‌ ಎನ್‌ ಟಿ ಆರ್ ಕೂಡ ಮಿಂಚಲಿದ್ದಾರೆ. ಈ ಬಗ್ಗೆ ಸಿನಿಮಾ ವಿಮರ್ಶಕ ತರುನ್‌ ಆದರ್ಶ್‌ ಟ್ವಿಟ್‌ ಮಾಡಿದ್ದಾರೆ. ʻವಾರ್‌ 2ʼ ಸಿನಿಮಾದಲ್ಲಿ ನಟಿಸುತ್ತಿರುವ ಸ್ಟಾರ್‌ ನಟರಿಬ್ಬರದ್ದೂ ಪೋಟೋ ಹಾಕಿ ಈ ಸಿನಿಮಾ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟಿದ್ದಾರೆ. ಪಾರ್ಟ್ 1 ಅನ್ನು ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದರೆ, ಪಾರ್ಟ್ 2 ಅನ್ನು ಅಯಾನ್ ಮುಖರ್ಜಿ ನಿರ್ದೇಶಿಸುವುದು ಖಚಿತವಾಗಿದೆ. ‘ವಾರ್’ ಪಾರ್ಟ್ 1ರಲ್ಲಿ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಜತೆಯಾಗಿ ನಟಿಸಿದ್ದರು. ಆದರೆ, ‘ವಾರ್ 2’ರಲ್ಲಿ ಹೃತಿಕ್ ಮತ್ತು ಎನ್‌ಟಿಆರ್ ಜತೆಯಾಗಲಿದ್ದಾರೆ. ‘ವಾರ್ 2’ ನಲ್ಲಿ ಎನ್‌ಟಿಆರ್ ಮತ್ತು ಹೃತಿಕ್ ರೋಷನ್ ಎರಡು ಗೂಢಚಾರರ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. 2024ರಲ್ಲಿ ಚಿತ್ರ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

-masthmagaa.com

Contact Us for Advertisement

Leave a Reply