ಎಂಎಸ್ ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಅರಿಜಿತ್ ಸಿಂಗ್!!

masthmagaa.com:

ಭಾರತದಲ್ಲಿ, ಕ್ರಿಕೆಟ್ ಕೇವಲ ಒಂದು ಗೇಮ್‌ ಅಲ್ಲ. ಅದೊಂದು ಧರ್ಮ, ಆಟಗಾರರನ್ನು ದೇವರಂತೆ ಪರಿಗಣಿಸಲಾಗುತ್ತದೆ. ಸಚಿನ್ ತೆಂಡೂಲ್ಕರ್ ಅವರನ್ನು ಸಾಮಾನ್ಯವಾಗಿ ‘ಕ್ರಿಕೆಟ್ ದೇವರು’ ಎಂದು ಕರೆಯಲಾಗುತ್ತದೆ. ಇನ್ನೂ ಕ್ರಿಕೆಟರ್ಸ್‌ಗಳ ಪ್ಯಾನ್ಸ್‌ ಅಂತು ನಮ್ಮ ಫೇವರೇಟ್‌ ಟೀಮ್‌ ವಿನ್‌ ಆಗಬೇಕು ಅಂತ ಹರಕೆಗಳನ್ನ ಸಹ ಹೊತ್ಕೊಳ್ತಾರೆ. ಆದರೆ ಸಚಿನ್‌ಗೆ ಮಾತ್ರವಲ್ಲದೇ ಧೋನಿಗೂ ಸಹ ಇಂತಹ ಫ್ಯಾನ್‌ ಪಾಲೋವರ್ಸ್‌ಗಳು ಇದಾರೆ. ಪೇಮಸ್‌ ಸಿಂಗರ್‌ ಅರಿಜಿತ್ ಸಿಂಗ್ ಅವರು ಧೋನಿ ಕಾಲಿಗೆ ನಮಸ್ಕರಿಸಿ ಗೌರವ ಸಲ್ಲಿಸಿದ್ದಾರೆ, ಈ ಒಂದು ಪೋಟೊ ಮತ್ತು ವಿಡಿಯೋ ಈವ ಎಲ್ಲಡೇ ವೈರಲ್‌ ಆಗ್ತಾ ಇದೆ.

2023ರ ಐಪಿಲ್‌ ಗ್ರಾಂಡ್‌ ಆಗಿ ಸ್ಟಾರ್ಟ್‌ ಆಗಿದೆ. ಈ ಸಂದರ್ಭದಲ್ಲಿ ನಟಿಮಣಿಯರ ಡ್ಯಾನ್ಸ್‌ ಪ್ರೋಗ್ರಾಮ್‌ಗಳು ಇತ್ತು. ಅಲ್ಲದೇ ಅರಿಜಿತ್ ಸಿಂಗ್ ಅವರು 25 ನಿಮಿಷಗಳ ಕಾಲ ನಾನ್‌ ಸ್ಟಾಪ್‌ ಪರ್ಫಾಮೆನ್ಸ್‌ ನೀಡಿದ್ದಾರೆ. ಎಮ್‌. ಎಸ್‌. ಧೋನಿ ಯವರ ಕಾಲಿಗೆ ಬಿದ್ದು ಅಭಿಮಾನಿಗಳ ಹೃದಯವನ್ನ ಗೆದ್ದಿದ್ದಾರೆ. ಐಪಿಎಲ್ 2023 ರ ಉದ್ಘಾಟನಾ ಸಮಾರಂಭದಲ್ಲಿ ಗಾಯಕ ಅರಿಜಿತ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರನ್ನು ಅರಿಜೀತ್‌ ಸಿಂಗ್‌ ಬೇಟಿಯಾದಾಗ ಅವರ ಕಾಲಿಗೆ ಬಿದ್ದಿದ್ದಾರೆ. ಇನ್ನ ಸ್ಟೇಡಿಯಂನಲ್ಲಿ ಲೈವ್‌ ಆಗಿ ನೋಡಿದ ಕ್ರಿಕೆಟ್‌ ಫ್ಯಾನ್ಸ್‌ಗೆ ಇದೊಂದು ಮೆಮೊರೆಬಲ್‌ ಮೂಮೆಂಟ್‌ ಆಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಅರಿಜಿತ್ ಸಿಂಗ್, ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಯವರ ಪರ್ಫಾಮೆನ್ಸ್‌ ಇತ್ತು. ರಾತ್ರಿ ಮ್ಯಾಚ್‌ ನಡಿತಾ ಇದ್ದಂತ ಬಿಸಿಸಿಐ ಅವರ ಜೊತೆ ಫೋಟೊಗೆ ಪೋಸ್‌ ಕೊಡೊಕೆ ಕರೆದಿದ್ರು, ಚೆನ್ನೈ ಸುಪರ್‌ ಕಿಂಗ್ಸ್‌ನ ನಾಯಕ ಧೋನಿ ಮೊದಲು ಬಂದು ಏಲ್ಲರಿಗೂ ಶೇಕ್‌ ಹ್ಯಾಂಡ್‌ ಮಾಡಿದ್ರು. ಅರ್ಜಿತ್‌ ಅವರಿಗೆ ಶೇಕ್‌ ಹ್ಯಾಂಡ್‌ ಮಾಡೋಕೆ ಹೋದಾಗ ಅರಿಜಿತ್ ಸಿಂಗ್ ಅವರು ಧೋನಿಯವರ ಕಾಲಿಗೆ ನಮಸ್ಕರಿಸಿ ಗೌರವ ಸಲ್ಲಿಸಿದರು.

ಅರಿಜಿತ್ ಸಿಂಗ್, ರಶ್ಮಿಕಾ ಮಂದಣ್ಣ, ಮತ್ತು ತಮನ್ನಾ ತಮ್ಮ ಪರ್ಫಾಮೆನ್ಸ್‌ನಿಂದ ಬೆಂಕಿ ಹಚ್ಚಿದ್ರು. ಇನ್ನೂ ಮೊದಲನೇ ಪರ್ಫಾಮೆನ್ಸ್‌ ಅರ್ಜಿತ್‌ ಅವರದೇ ಆಗಿತ್ತು, ಅರ್ಜಿತ್‌ ಅವರು ಸುಮಾರು 25 ನಿಮಿಷಗಳ ಕಾಲ ಹಾಡನ್ನ ಹಾಡಿ ಜನರನ್ನ ಖುಷಿಪಡಿಸಿದ್ದರು. ಅರಿಜಿತ್ ಅವರ ಎಲ್ಲಾ ನ್ಯೂ ಸಾಂಗ್ಸ್‌ ಮತ್ತು ಫೇಮಸ್‌ ಸಾಂಗ್‌ಗಳನ್ನ ಅವರು ಹಾಡಿದರು. “ಕೇಶ್ರಿಯಾ, ಜುಮೇ ಜೋ ಪಠಾಣ್” ಮತ್ತು “ದೇವ, ದೇವ” ನಂತಹ ಹಿಟ್‌ಗಳನ್ನು ಹಾಡಿದರು. ಆರ್‌ಆರ್‌ಆರ್‌ನ ಆಸ್ಕರ್ ವಿಜೇತ ‘ನಾಟು ನಾಟು’ ಹಾಡು ಮತ್ತು ಪುಷ್ಪ ಮೂವಿಯ ಹಾಡುಗಳಿಗೆ ರಶ್ಮಿಕಾ ಹೆಜ್ಜೆ ಹಾಕಿದ್ರೆ, ತಮನ್ನಾ ಇತರ ಹಾಡುಗಳ ಜೊತೆಗೆ ‘ಊ ಅಂಟವಾ’ ಸಾಂಗ್‌ ಗೆ ಹೆಜ್ಜೆ ಹಾಕಿದ್ದಾರೆ. ಇನ್ನೂ 2023ರ ಮೊದಲ ಪಂದ್ಯದಲ್ಲಿ CSKಯನ್ನ 5 ವಿಕೆಟ್‌ಗಳಿಂದ ಸೋಲಿಸಿ ಗುಜರಾತ್ ಟೈಟಾನ್ಸ್ ವಿನ್‌ ಆಗಿದ್ದಾರೆ.

-masthmagaa.com

Contact Us for Advertisement

Leave a Reply