ಪಾಕಿಸ್ತಾನದ ಕೃತ್ಯಗಳ ಬಗ್ಗೆ ಜಗತ್ತು ಕಣ್ಣು ಬಿಡಬೇಕು: ಅರಿಂಧಮ್ ಬಗ್ಚಿ

masthmagaa.com:

ʻಪಾಕಿಸ್ತಾನ ಭಯೋತ್ಪಾದನೆಗೆ ಸಪೋರ್ಟ್‌ ಮಾಡೋ ವಿಚಾರವಾಗಿ ನಮಗೆ ಕನ್ಸರ್ನ್‌ ಇದೆ. ಬೇರೆ ದೇಶಗಳೂ ಕೂಡ ಇದನ್ನ ಸೀರಿಯಸ್ಸಾಗಿ ತಗೋಬೇಕುʼ ಅಂತ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂಧಮ್‌ ಬಗ್ಚಿ ಹೇಳಿದ್ದಾರೆ. ಆ ಮೂಲಕ ಪಾಕ್‌ ಸೇನಾ ಜನರಲ್‌ ಆಸಿಮ್‌ ಮುನೀರ್‌ಗೆ ಅಮೆರಿಕ ಆತಿಥ್ಯ ನೀಡಿರೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʻಅಮೆರಿಕ, ಪಾಕ್‌ಗಳ ಈ ಮೀಟಿಂಗ್‌ ಬಗೆಗಿನ ಕೆಲವು ರಿಪೋರ್ಟ್‌ಗಳ ಬಗ್ಗೆ ಗಮನ ಹರಿಸಿದ್ದೇವೆ. ಪಾಕಿಸ್ತಾನ ಭಯೋತ್ಪಾದನೆಗೆ ಸಪೋರ್ಟ್‌ ಮಾಡೋದು ನಮಗೆ ಗೊತ್ತು. ಗಡಿಯಾಚೆಗಿನ ದಾಳಿಗಳಿಗೆ ಉತ್ತೇಜನ ಕೊಡೋದನ್ನೂ ನೋಡಿದ್ದೇವೆ. ಈ ವಿಚಾರವಾಗಿ ನಮ್ಮಷ್ಟೇ ಕಾಳಜಿಯನ್ನ ಎಲ್ಲಾ ದೇಶಗಳೂ ತಗೊಳ್ಬೇಕು.ʼ ಅಂದಿದ್ದಾರೆ. ಇನ್ನು ಮಾಲ್ಡೀವ್ಸ್‌ ಸರ್ಕಾರ ಭಾರತದ ಜೊತೆ ಹೈಡ್ರೋಗ್ರಫಿ ಸರ್ವೇ ಒಪ್ಪಂದವನ್ನ ರಿನೀವ್ ಮಾಡೋಕೆ ನಿರಾಕರಿಸಿದ ವಿಚಾರವಾಗಿ ಬಗ್ಚಿ ಮಾತನಾಡಿದ್ದಾರೆ. ಹೈಡ್ರೋಗ್ರಫಿ ಸರ್ವೇ ಅಂದ್ರೆ ಸಮುದ್ರ ತಳದ ನೆಲದ ರೂಪುರೇಷೆಗಳನ್ನ ಸರ್ವೇ ಮಾಡೋದು. ಸಬ್‌ ಮರೀನ್‌ಗಳ ಓಡಾಟ ಸೇರಿದಂತೆ ಹಲವು ಕಾರಣಗಳಿಗೆ ಈ ಸರ್ವೇಯ ಡೇಟಾ ಹೆಲ್ಪ್‌ ಆಗತ್ತೆ. ಮಾಲ್ಡೀವ್ಸ್‌ನ ನೂತನ ಸರ್ಕಾರ ಭಾರತದ ಜೊತೆಗಿನ ಈ ಒಪ್ಪಂದಕ್ಕೆ ಬ್ರೇಕ್‌ ಹಾಕಿದೆ. ಈ ಬಗ್ಗೆ ಮಾತನಾಡಿರೋ ಬಗ್ಚಿ ʻಭಾರತ ಹೈಡ್ರೋಗ್ರಫಿ ಫೀಲ್ಡ್‌ನಲ್ಲಿ ತನ್ನ ಎಬಿಲಿಟಿಯನ್ನ ಪ್ರೂವ್‌ ಮಾಡಿದೆ. ನಮ್ಮ ನೆರೆಯ ದೇಶಗಳು ಇದರ ಫಲಾನುಭವಿಗಳಾಗಿದ್ದಾರೆʼ ಅಂದಿದ್ದಾರೆ. ಮಾಲ್ಡೀವ್ಸ್‌ ನಿರ್ಧಾರದ ಬಗ್ಗೆ ಡೈರೆಕ್ಟಾಗಿ ಮಾತನಾಡಿಲ್ಲ. ಇನ್ನು ಕೆಂಪು ಸಮುದ್ರದಲ್ಲಿ ಹೌತಿಗಳ ಉಪಟಳದ ಬಗ್ಗೆಯೂ ಬಗ್ಚಿ ಮಾತನಾಡಿದ್ದಾರೆ. ʻಈ ಭಾಗದಲ್ಲಿ ಹಡಗುಗಳ ಮುಕ್ತ ಓಡಾಟದ ಬಗ್ಗೆ ನಮಗೆ ಕನ್ಸರ್ನ್‌ ಇದೆ. ಅಲ್ಲಿನ ಸ್ಥಿತಿಯನ್ನ ಮಾನಿಟರ್‌ ಮಾಡೋದನ್ನ ಮುಂದುವರೆಸ್ತೀವಿ ಅಂದಿದ್ದಾರೆ.

-masthmagaa.com

Contact Us for Advertisement

Leave a Reply