ಜೋರಾಗುತ್ತಾ ಭಾರತ-ಚೀನಾ ಗಡಿ ಸಂಘರ್ಷ? ಗಡಿಗೆ ಭೂಸೇನಾ ಮುಖ್ಯಸ್ಥರ ಭೇಟಿ

masthmagaa.com:

ಭೂಸೇನಾ ಮುಖ್ಯಸ್ಥ ಜನರಲ್​ ಎಂಎಂ ನರವನೆ ಇವತ್ತು ಪೂರ್ವ ಲಡಾಖ್​ನ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿದ್ರು. ಈ ವೇಳೆ ಅವರಿಗೆ ಗಡಿಯಲ್ಲಿನ ಸದ್ಯದ ಪರಿಸ್ಥಿತಿ, ಸೇನಾ ಸಿದ್ಥತೆ ಬಗ್ಗೆ ಸೇನಾಧಿಕಾರಿಗಳು ವಿವರಣೆ ನೀಡಿದ್ರು ಅಂತ ಭಾರತೀ ಸೇನೆ ಮಾಹಿತಿ ನೀಡಿದೆ. ಅಂದ್ಹಾಗೆ ಪೂರ್ವ ಲಡಾಖ್​ನ ಭಾರತ-ಚೀನಾ ಗಡಿಯಲ್ಲಿ ಚೀನಾ ಭಾರತದ ಜೊತೆ ದೀರ್ಘಾವಧಿ ಸಂಘರ್ಷಕ್ಕೆ ಸಿದ್ಧತೆ ಮಾಡಿಕೊಳ್ತಿದೆ. ತನ್ನ ಸೈನಿಕರಿಗೆ ಹೆಚ್ಚೆಚ್ಚು ಮನೆಗಳನ್ನ ನಿರ್ಮಿಸ್ತಿದೆ ಅಂತ ವರದಿಯಾಗಿತ್ತು. ಇದರ ಬೆನ್ನಲ್ಲೇ ಭೂಸೇನಾ ಮುಖ್ಯಸ್ಥ ಪೂರ್ವ ಲಡಾಖ್​ನ ಫಾರ್ವರ್ಡ್​ ಪೋಸ್ಟ್​ಗಳಿಗೆ ವಿಸಿಟ್ ಕೊಟ್ಟಿರೋದು ಮಹತ್ವ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply