ಜೈಲಲ್ಲಿ ಶಾರುಖ್ ಮಗ | ಬುಧವಾರ ಜಾಮೀನು ಅರ್ಜಿ ವಿಚಾರಣೆ

masthmagaa.com:

ಹಡಗಿನಲ್ಲಿ ನಶಾ ಲೋಕ ಕೇಸ್ ಸಂಬಂಧ ಬಂಧಿತ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಬುಧವಾರ ನಡೆಯಲಿದೆ. ಆರ್ಯನ್ ಖಾನ್ ಜಾಮೀನು ಅರ್ಜಿ ಸಂಬಂಧ ಪ್ರತಿಕ್ರಿಯೆ ಸಲ್ಲಿಸಲು ಒಂದು ವಾರ ಟೈಮ್ ಬೇಕು ಅಂತ NCB ಕೋರ್ಟ್ ಗೆ ಹೇಳಿತ್ತು. ಆದ್ರೆ ಅಷ್ಟೆಲ್ಲ ಟೈಮ್ ಕೊಡೋಕೆ ಆಗಲ್ಲ ಅಂದಿರೋ NDPS ವಿಶೇಷ ನ್ಯಾಯಾಲಯ, ಬುಧವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸೋದಾಗಿ ಹೇಳಿದೆ. ಅಷ್ಟರ ಒಳಗೆ NCB ಪ್ರತಿಕ್ರಿಯೆ ಸಲ್ಲಿಸಬೇಕಿದೆ. ಸದ್ಯ ಆರ್ಯನ್ ಖಾನ್ ಸಧೆರಿ 6 ಬಂಧಿತರೂ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ.

-masthmagaa.com

Contact Us for Advertisement

Leave a Reply