ಆರ್ಯನ್ ಖಾನ್ ಅಪರಾಧ ಎಸಗಿರೋದಕ್ಕೆ ಸಾಕ್ಷ್ಯ ಇಲ್ಲ: ಕೋರ್ಟ್​​

masthmagaa.com:

ಬಾಲಿವುಡ್​​​ ಬಾದ್​​ಶಾ ಶಾರೂಖ್ ಖಾನ್​ ಪುತ್ರ ಆರ್ಯನ್ ಖಾನ್​​ಗೆ ಜಾಮೀನು ನೀಡಿದ್ದ ಆದೇಶ ಹೊರಬಿದ್ದಿದೆ. ಇದ್ರಲ್ಲಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ ಮುನ್ ಧಮೇಚಾ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ಅಪರಾಧ ಎಸಗಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಅಂತ ಬಾಂಬೆ ಹೈಕೋರ್ಟ್​ ಹೇಳಿದೆ. ಸದ್ಯ ಪತ್ತೆಯಾಗಿರೋ ವಿವಾದಾಸ್ಪದ ವಾಟ್ಸಾಪ್ ಚಾಟ್​​ ಕೂಡ ಮೂವರು ಆರೋಪಿಗಳು ಕಾನೂನು ಬಾಹಿರ ಚಟುವಟಿಕೆ ನಡೆಸಲು ಒಪ್ಪಿದ್ದಾರೆ ಅನ್ನೋದನ್ನು ಕೋರ್ಟ್​​​​ಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಅಂತ ಹೇಳಿದೆ. ಅವರು ಹಡಗಲ್ಲಿ ಪ್ರಯಾಣಿಸುತ್ತಿದ್ರು ಅಂದಮಾತ್ರಕ್ಕೆ ಅವರ ವಿರುದ್ಧ ಪಿತೂರಿಯ ಆರೋಪಗಳನ್ನು ಮಾಡಲು ಸಾಧ್ಯವಿಲ್ಲ ಅಂತ ಕೂಡ ಕೋರ್ಟ್​ ಹೇಳಿದೆ.

-masthmagaa.com

Contact Us for Advertisement

Leave a Reply