ಆರ್ಯನ್ ಖಾನ್​​ಗೆ ಇವತ್ತೂ ಸಿಗಲಿಲ್ಲ ಜಾಮೀನು: ಇವತ್ತಿನ ಬೆಳವಣಿಗೆ ನೋಡಿ

masthmagaa.com:

ಕ್ರೂಸ್​ಶಿಪ್​ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರೋ ಶಾರೂಖ್ ಖಾನ್ ಮಗ ಆರ್ಯನ್ ಖಾನ್​​​ ಜಾಮೀನು ಅರ್ಜಿ ವಿಚಾರಣೆ ಬಾಂಬೆ ಹೈಕೋರ್ಟ್​​​ನಲ್ಲಿ ನಡೀತು. ಆದ್ರೆ ಇವತ್ತು ವಾದ ಆಲಿಸಿದ ಕೋರ್ಟ್​ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಆರ್ಯನ್ ಖಾನ್​​ಗೆ ಜಾಮೀನು ನೀಡಬಾರದು ಅಂತ ಎನ್​ಸಿಬಿ ಅಧಿಕಾರಿಗಳು ಕೋರ್ಟ್​​​ಗೆ ಅಫಿಡವಿಟ್ ಸಲ್ಲಿಸಿದ್ರು. ಇದೊಂದು ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲವಾಗಿದ್ದು, ಇದನ್ನು ಭೇದಿಸಲು ಏಜೆನ್ಸಿಗೆ ಸ್ವಲ್ಪ ಟೈಂ ಬೇಕು. ಒಂದ್ವೇಳೆ ಆರ್ಯನ್ ಖಾನ್​​ಗೆ ಜಾಮೀನು ನೀಡಿದ್ರೆ ತನಿಖೆಯ ಮೇಲೆ ಪರಿಣಾಮ ಬೀರಬಹುದು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು. ಸಾಕ್ಷ್ಯ ನಾಶಪಡಿಸೋ ಸಾಧ್ಯತೆ ಇರುತ್ತೆ ಅಂತ ಎನ್​ಸಿಬಿ ಅಫಿಡವಿಟ್​​ನಲ್ಲಿ ಉಲ್ಲೇಖಿಸಿತ್ತು.
ಇನ್ನು ಆರ್ಯನ್ ಖಾನ್ ಪರ ವಕೀಲರು ಎನ್​ಸಿಬಿ ಮತ್ತು ಪ್ರಕರಣದ ಪ್ರಮುಖ ಸಾಕ್ಷಿ ಕೆಪಿ ಗೋಸವಿಯ ಬಾಡಿಗಾರ್ಡ್​ ಪ್ರಭಾಕರ್ ಸೈಲ್ ಸಲ್ಲಿಸಿದ್ದ ಅಫಿಡವಿಟ್​​​ಗೆ ಉತ್ತರ ನೀಡಿದ್ದಾರೆ. ಪ್ರಭಾಕರ್ ಸೈಲ್ ನಿನ್ನೆ ಸಲ್ಲಿಸಿದ್ದ ಅಫಿಡವಿಟ್​ನಲ್ಲಿ ಸಮೀರ್ ವಾಂಖೆಡೆಗೆ 8 ಕೋಟಿ ರೂಪಾಯಿ ದುಡ್ಡು ನೀಡಲಾದ ಆರೋಪ ಮಾಡಿದ್ರು. ಆದ್ರೆ ಆರ್ಯನ್ ಖಾನ್​​​​ಗೆ ಪ್ರಭಾಕರ್ ಸೈಲ್ ಯಾರಂತಾನೇ ಗೊತ್ತಿಲ್ಲ. ಎನ್​ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡುವಾಗ ಆರ್ಯನ್ ಬಳಿ ಮಾದಕ ವಸ್ತು ಇರಲಿಲ್ಲ. ಸೇವಿಸಿಯೂ ಇರಲಿಲ್ಲ ಅಂತ ಆರ್ಯನ್ ಪರ ವಕೀಲರು ಉತ್ತರ ನೀಡಿದ್ದಾರೆ. ಜೊತೆಗೆ ಮಾಧ್ಯಮ, ಸಾಮಾಜಿಲ ಜಾಲತಾಣಗಳಲ್ಲಿ ಮಾಡಲಾಗ್ತಿರೋ ಆರೋಪಗಳಿಗೂ ಆರ್ಯನ್​​ಗೂ ಸಂಬಂಧವೇ ಇಲ್ಲ ಅಂತ ಕೂಡ ಆರ್ಯನ್ ಖಾನ್ ಪರ ವಕೀಲರು ನೀಡಿರೋ ಪ್ರತಿಕ್ರಿಯೆಯಲ್ಲಿದೆ.

-masthmagaa.com

Contact Us for Advertisement

Leave a Reply