ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಬಲವಂತ ಇಲ್ಲ: ಕೇಂದ್ರ ಸರ್ಕಾರ

masthmagaa.com:

ಯಾವ ವ್ಯಕ್ತಿಗೂ ಒಪ್ಪಿಗೆ ಇಲ್ಲದೆ ಬಲವಂತವಾಗಿ ಕೊರೋನಾ ವ್ಯಾಕ್ಸಿನ್‌ ಹಾಕಕ್ಕೆ ಆಗೋದಿಲ್ಲ. ಅಂತ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಜೊತೆಗೆ ವ್ಯಾಕ್ಸಿನ್‌ ಸರ್ಟಿಫಿಕೇಟನ್ನ ಯಾವುದಕ್ಕು ಕಡ್ಡಾಯ ಮಾಡಿಲ್ಲ. ಹಾಗೆ ವ್ಯಾಕ್ಸಿನ್‌ ಹಾಕಿಸಿಕೊಳ್ಳುವುದನ್ನು ಕೂಡ. ಇನ್ನು ವಿಕಲಾಂಗ ವ್ಯಕ್ತಿಗಳಿಗೆ ಆದ್ಯತೆಯ ಮೇರೆಗೆ ಲಸಿಕೆಯನ್ನ ಹಾಕಲಾಗುವುದು ಅಂತಲು ನ್ಯಾಯಾಲಯಕ್ಕೆ ಹೇಳಿದೆ. ಪ್ರಸ್ತುತ ಕೊರೋನಾದಿಂದ ರಕ್ಷಣೆ ಪಡೆಯಲು ವ್ಯಾಕ್ಸಿನೇಶನ್‌ ಅನ್ನ ಹಾಕಿಸಿಕೊಳ್ಳಬೇಕು. ಅದಕ್ಕಾಗಿ ಏನೆಲ್ಲ ಅನುಕೂಲಕರ ವಾತಾವರಣ ಬೇಕೊ ಅದೆಲ್ಲವನ್ನ ಸಿದ್ದ ಪಡಿಸಿದ್ದೇವೆ. ಅದಾಗ್ಯು ಲಸಿಕೆಯನ್ನ ಹಾಕಿಸಿಕೊಳ್ಳದೆ ಇದ್ರೆ ಅಂತಹವರಿಗೆ ಒತ್ತಾಯ ಮಾಡುವುದಿಲ್ಲ ಅಂತ ಕೇಂದ್ರ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply