ಅಪೊಲೊ-11 ಮಿಷನ್​ನ ‘ಮರೆತುಹೋದ ಗಗನಯಾತ್ರಿ’ ಇನ್ನು ನೆನಪು ಮಾತ್ರ

masthmagaa.com:

ಅಪೋಲೋ – 11 ಮಿಷನ್​ ಬಗ್ಗೆ ನಿಮಗೆ ಗೊತ್ತಿರಬಹುದು. ಗೊತ್ತಿಲ್ಲ ಅಂದ್ರೆ ಹೇಳ್ತೀವಿ.. ಇದು ಚಂದ್ರನ ಅಂಗಳನ ಮೇಲೆ ಮೊದಲ ಬಾರಿ ಮಾನವನನ್ನ ಇಳಿಸಿದ ಮಿಷನ್. 1969ರಲ್ಲಿ ನಾಸಾದ ಮೂವರು ಗಗನಯಾತ್ರಿಗಳಾದ ನೀಲ್ ಆರ್ಮ್​ಸ್ಟ್ರಾಂಗ್, ಬಝ್​ ಆಲ್ಡ್ರಿನ್ ಮತ್ತು ಮೈಕಲ್ ಕೋಲಿನ್ಸ್ ಈ ಮಿಷನ್ ಕೈಗೊಂಡಿದ್ರು. 1969ರ ಜುಲೈ 20ಕ್ಕೆ ಚಂದ್ರನ ಮೇಲೆ ಮೊದಲು ಕಾಲಿಟ್ಟಿದ್ದು ನೀಲ್ ಆರ್ಮ್​​ಸ್ಟ್ರಾಂಗ್ ಮತ್ತು ಬಝ್ ಆಲ್ಡ್ರಿನ್​ ಮಾತ್ರ. ಅವರಿಬ್ರು ಇಳಿದು ಹತ್ತೋವರೆಗೆ ಕಮ್ಯಾಂಡ್​ ಮಾಡ್ಯೂಲ್​ ಹಾರುತ್ತಿರುವಂತೆ ನೋಡಿಕೊಂಡಿದ್ದೆಲ್ಲಾ ಮೈಕಲ್​ ಕೋಲಿನ್ಸ್. ಅಂದ್ರೆ ಒಂದ್​ರೀತಿ ಪೈಲಟ್​ ರೀತಿ ಕೆಲಸ ಮಾಡಿದ್ರು ಮೈಕಲ್ ಕೋಲಿನ್ಸ್​. ಹೀಗಾಗಿ ಆರ್ಮ್​​ಸ್ಟ್ರಾಂಗ್​​ ಮತ್ತು ಆಲ್ಡ್ರಿನ್​ನಷ್ಟು ಮೈಕಲ್ ಕೋಲಿನ್ಸ್​ ಅವರ ಹೆಸರು ಪ್ರಸಿದ್ಧಿ ಪಡೆಯಲೇ ಇಲ್ಲ. ಇದೇ ಕಾರಣಕ್ಕೆ ಮೈಕಲ್ ಕೋಲಿನ್ಸ್​ ಅವರನ್ನ ‘forgotten astronaut’ – ಮರೆತುಹೋದ ಗಗನಯಾತ್ರಿ ಅಂತಾನೇ ಕರೀತಾರೆ. ಹೀಗೆ ಅಪೋಲೋ-11 ಸ್ಪೇಸ್​​ಫ್ಲೈಟ್​ನ ಭಾಗವಾಗಿದ್ದ ಮೈಕಲ್ ಕೋಲಿನ್ಸ್​ ತಮ್ಮ 90ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಕೋಲಿನ್ಸ್ ಅಗಲಿಕೆಗೆ ನಾಸಾ ಕೂಡ ಗೌರವ ನಮನ ಸಲ್ಲಿಸಿದೆ. 1969ರಲ್ಲಿ ಚಂದ್ರನ ಮೇಲೆ ಲೂನಾರ್ ಮಾಡ್ಯೂಲ್​ ‘ಈಗಲ್’ ಲ್ಯಾಂಡ್ ಆಗಿ, ಬಳಿಕ ಕಮ್ಯಾಂಡ್​ ಮಾಡ್ಯೂಲ್ ‘ಕೊಲಂಬಿಯಾ’ಗೆ ವಾಪಸ್ ಬರುತ್ತಿರೋ ಫೋಟೋವನ್ನ ಮೈಕಲ್ ಕೋಲಿನ್ಸ್ ಕ್ಲಿಕ್ ಮಾಡಿದ್ದರು. ಅದೇ ಫೋಟೋವನ್ನ ಟ್ವೀಟ್​ ಮಾಡುವ ಮೂಲಕ ನಾಸಾ ಗೌರವ ನಮನ ಸಲ್ಲಿಸಿದೆ.

-masthmagaa.com

Contact Us for Advertisement

Leave a Reply