ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಜಿನ್​ಪಿಂಗ್, ಪುಟಿನ್ ಹೇಳಿದ್ದೇನು..?

masthmagaa.com:

ಭಾರತದ ಅಧ್ಯಕ್ಷತೆಯಲ್ಲಿ 13ನೇ ಬ್ರಿಕ್ಸ್ ಶೃಂಗಸಭೆ ಆರಂಭವಾಗಿದೆ. ಕೊರೋನ ಕಾರಣ ಈ ಸಲ ಡಿಜಿಟಲ್ ಆಗಿ ಮೀಟಿಂಗ್ ನಡೀತಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್, ಬ್ರೆಜಿಲ್ ನ ಜೇರ್ ಬೋಲ್ಸೋನಾರೋ ಹಾಗೂ ದಕ್ಷಿಣ ಆಫ್ರಿಕಾದ ಸಿರಿಲ್ ರಾಮಾಫೋಸಾ ಭಾಗವಹಿಸಿದ್ದರು. ವ್ಲಾದಿಮಿರ್ ಪುಟಿನ್ ಮಾತನಾಡಿ

ಅಫ್ಘಾನಿಸ್ತಾದಿಂದ ಅಮೆರಿಕ ಇದ್ದಕ್ಕಿದ್ದಂತೆ ಹೊರಹೋಗಿ ಇಡೀ ಜಗತ್ತಿನ ಭದ್ರತೆಗೆ ಆಪತ್ತು ಎದುರಾಗುವಂತೆ ಮಾಡಿದೆ ಅಂತ ದೂರಿದ್ರು. ಅಫ್ಘನಿಸ್ತಾನ ಉಗ್ರರು ಹಾಗೂ ಮಾದಕವಸ್ತು ಸಾಗಣಿಕೆದಾರರ ತಾಣದಂತಾಗಿ ಅಕ್ಕಪಕ್ಕದ ದೇಶಗಳ ಪಾಲಿಗೆ ಸೆಕ್ಯೂರಿಟಿ ರಿಸ್ಕ್ ಆಗದಂತೆ ನೋಡಿಕೊಳ್ಳಬೇಕು’
-ವ್ಲಾದಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ
‘ನಾವೆಲ್ಲರೂ ಒಟ್ಟಾಗಿ ಒಂದೇ ಮನಸ್ಸಿನಿಂದ ಪ್ರಯತ್ನಪಟ್ಟರೇ ಬ್ರಿಕ್ಸ್ ಅದ್ಭುತ ಪ್ರಗತಿ ಕಾಣಲು ಸಾಧ್ಯ’
-ಶಿ ಜಿನ್ಪಿಂಗ್, ಚೀನಾ ಅಧ್ಯಕ್ಷ
‘ನಾವೆಲ್ಲರೂ ಬ್ರಿಕ್ಸ್ ಭಯೋತ್ಪಾದನಾ ನಿಗ್ರಹ ಆಕ್ಷನ್ ಪ್ಲಾನ್ ಅಡಾಪ್ಟ್ ಮಾಡಿದ್ದೇವೆ’
-ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ
ಸಾಮಾನ್ಯವಾಗಿ ಇಂತಾ ಶೃಂಗಸಭೆ ಎಲ್ಲ ಆದಮೇಲೆ ವರ್ಲ್ಡ್ ಲೀಡರ್ಸ್ ಒಟ್ಟಿಗೆ ನಿಂತು ಗ್ರೂಪ್ ಫೋಟೋಗೆ ಪೋಸ್ ನೀಡ್ತಾರೆ. ಆದ್ರೆ ಈ ಸಲ ಡಿಜಿಟಲ್ ಮೀಟಿಂಗ್ ಅಲಾ? ಸೋ ಆ ವಿಡಿಯೋ ಕಾನ್ಫರೆನ್ಸ್ ಮಾನಿಟರ್ ಫ್ರೇಮ್ ಗಳನ್ನೇ ಕೊಲಾಜ್ ಮಾಡಿ ಗ್ರೂಪ್ ಫೋಟೋ ಥರ ಪೋಸ್ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply